ಕೇಸರಿ ಶಾಲುಧಾರಿ ಗುಂಪುಗಳನ್ನು ಎದುರಿಸಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ್ದ ಮುಸ್ಕಾನ್ ಬೀಬಿಗೆ 5 ಲಕ್ಷ ಬಹುಮಾನ ಘೋಷಣೆ

ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳ ಸಮೂಹ ಮುಸ್ಲೀಂ ವಿದ್ಯಾರ್ಥಿನಿಯ ಹಿಂದೆ ʼಜೈ ಶ್ರೀರಾಮ್ʼ ಎಂದು ಅಣಕಿಸಿದ ಹಿನ್ನೆಲೆಯಲ್ಲಿ ಬಿಬಿ ಮುಸ್ಕಾನ್ ಖಾನ್ ಎಂಬ ವಿದ್ಯಾರ್ಥಿನಿ ಒಬ್ಬಂಟಿಯಾಗಿ ಕಾಲೇಜು ಕ್ಯಾಂಪಸ್ಸಿನಲ್ಲೇ ʼಅಲ್ಲಾಹು ಅಕ್ಬರ್ʼ ಎಂದು ಘೋಷಣೆ ಕೂಗಿ ತಿರುಗೇಟು ನೀಡಿದ್ದಳು. ಈ ದಿಟ್ಟತನಕ್ಕೆ ವ್ಯಾಪಕ ಪ್ರಶಂಸೆಗಳ ಮಹಾಪೂರ ಆಕೆಗೆ ಒದಗಿತ್ತು. ಈ ಬೆಳವಣಿಗೆಯ ಜೊತೆಗೆ ಜಮಾಅತ್ ಉಲ್ಮಾ ಐ ಹಿಂದ್ ಸಂಘಟನೆಯು ಬಿಬಿ ಮುಸ್ಕಾನ್ ಖಾನ್ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ್ದು … Read more

ಮೇಕೆದಾಟು ಪಾದಯಾತ್ರೆ ಸ್ಥಗಿತಗೊಳಿಸಿದ ಕಾಂಗ್ರೆಸ್

ಮೇಕೆದಾಟು ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ‘ನಮ್ಮ ನೀರು ನಮ್ಮ ಹಕ್ಕು’ ಪಾದಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹೈಕೋರ್ಟ್ ಆದೇಶ, ಬಿಜೆಪಿ ಒತ್ತಡ, ಪೊಲೀಸ್ ಪ್ರಕರಣ ಈ ಎಲ್ಲಾ ಒತ್ತಡದ ಹಿನ್ನೆಲಯಲ್ಲಿ ಪಾದಯಾತ್ರೆ ಸ್ಥಗಿತಗೊಳಿಸಲು ಕಾಂಗ್ರೆಸ್ ತೀರ್ಮಾನ ಕೈಗೊಂಡಿದೆ. ರಾಮನಗರ ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾದಯಾತ್ರೆ ಸ್ಥಗಿತಗೊಳಿಸಲು ಕಾಂಗ್ರೆಸ್ ತೀರ್ಮಾನ ಕೈಗೊಂಡಿದೆ.

ಬಿಜೆಪಿ ಪ್ರಧಾನ ಕಛೇರಿಯಲ್ಲಿದ್ದ 42 ಮಂದಿಗೆ ಕೊರೋನಾ ಪೊಸಿಟಿವ್

ದೆಹಲಿಯಲ್ಲಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಛೇರಿಯಲ್ಲಿದ್ದ 42 ಮಂದಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಬಿಜೆಪಿಯ ಕೋರ್ ಕಮಿಟಿ ಸಭೆಯ ಮುಂಚಿತವಾಗಿ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಕೊರೋನಾ ದೃಢಪಟ್ಟವರನ್ನು ಹೋಮ್ ಕ್ವಾರಂಟೈನ್ ಆಗುವಂತೆ ಸೂಚಿಸಲಾಗಿದೆ. ಕಛೇರಿಯನ್ನು ಸಂಪೂರ್ಣವಾಗಿ ಸ್ಯಾನಿಟೈಝ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇಡೀ ರಾಜ್ಯದಲ್ಲಿ ಯಾಕೆ ಕರ್ಫ್ಯೂ? ಇದಕ್ಕೆ ನನ್ನ ವಿರೋಧವಿದೆ. -ತನ್ನದೇ ಸರಕಾರದ ವಿರುದ್ಧ ಕಿಡಿಕಾರಿದ ಸಚಿವ ಕೆ ಎಸ್ ಈಶ್ವರಪ್ಪ

ಕೋವಿಡ್ ಉಲ್ಬಣದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರವು ಜಾರಿಗೊಳಿಸಿದ ವೀಕೆಂಡ್ ಕರ್ಫ್ಯೂ ” ಇಡೀ ರಾಜ್ಯಕ್ಕೆ ಸೀಮಿತಗೊಳಿಸಿದ್ದು ಸರಿ ಅಲ್ಲ. ಗಡಿ ಜಿಲ್ಲೆಗಳಿಗೆ ವಿಶೇಷವಾಗಿ ಒತ್ತು ನೀಡಬೇಕು. ಜನರೊಂದಿಗೆ ಸರಕಾರ ಸ್ಪಂದಿಸಬೇಕು. ಇದಕ್ಕೆ ನನ್ನ ವಿರೋಧ ಇದೆ” ಎಂದು ತನ್ನದೇ ಸರಕಾರದ ವಿರುದ್ಧ ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ. “ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಮತ್ತು ಆರೋಗ್ಯ ಇಲಾಖೆಯಂತೆ ಈ ನಿಯಮವನ್ನು ನಾವು ಜಾರಿಗೊಳಿಸಿದ್ದೇವೆ. ಯಾರೊಬ್ಬರ ವೈಯುಕ್ತಿಕ ಉದ್ದೇಶಕ್ಕೆ ಸೀಮಿತವಾದ ನಿಯಮವಲ್ಲ. ಇದು ಕೇವಲ ಶಿವಮೊಗ್ಗಕ್ಕೆ ಮಾತ್ರವಲ್ಲ ಹೊರತು ಇಡೀ ರಾಜ್ಯಕ್ಕೆ. … Read more

ಮುಂಬೈ: ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನವರಿ 31ರವರೆಗೆ ಶಾಲೆಗಳಿಗೆ ಬಂದ್ ಘೋಷಿಸಿದ ಸರಕಾರ

ಮಹರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ದ್ವಿಗುಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಮುಂಬೈನ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿ ಮುಂಬೈ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. 1ರಿಂದ‌‌ 9 ನೇ ತರಗತಿಯ ಶಾಲೆಗಳನ್ನು ಜನವರಿ ಅಂತ್ಯದವರೆಗೆ ಬಂದ್ ಮಾಡುವ ಮೂಲಕ ಆದೇಶ ಹೊರಡಿಸಿದೆ. 10 ರಿಂದ 12 ನೇ ತರಗತಿ ಮತ್ತು ಮೇಲ್ಪಟ್ಟ ತರಗತಿಗಳು ಯಥಾ ಪ್ರಕಾರ ನಡೆಯಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ದಿನನಿತತ್ಯ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಶಾಲಾ ಕಾಲೇಜು … Read more

ಲಡಾಖ್: ಪಾಂಗಾಂಗ್ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿರುವ ಚೀನಾ!

ಪೂರ್ವ ಲಡಾಖ್‌ನಲ್ಲಿರುವ ಪಾಂಗಾಂಗ್ ಸರೋವರದ ಮೇಲೆ ಚೀನಾ ಸೇತುವೆಯನ್ನು ನಿರ್ಮಿಸುತ್ತಿದೆ ಎಂದು ಭೂ-ಗುಪ್ತಚರ ತಜ್ಞ ಡೇಮಿಯನ್ ಸೈಮನ್ ಅವರ ಉಪಗ್ರಹ ಚಿತ್ರಗಳು ಸೂಚಿಸುತ್ತಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಚೀನಾದ ಭೂಪ್ರದೇಶದೊಳಗೆ ಬರುವ ಸರೋವರದ ಒಂದು ಭಾಗಕ್ಕೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆಯು ಸರೋವರದ ಎರಡೂ ದಡಗಳನ್ನು ಸಂಪರ್ಕಿಸುತ್ತದೆ ಮತ್ತು ಚೀನಾಕ್ಕೆ ಸೈನಿಕರು ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ತ್ವರಿತವಾಗಿ ಚಲಿಸುವ ಸಾಮರ್ಥ್ಯವನ್ನು ನೀಡುತ್ತದೆ. ಸೈಮನ್ ಅವರ ಟ್ವೀಟ್ ಚಿತ್ರದ ಪ್ರಕಾರ ಸರೋವರದ ಕಿರಿದಾದ ಭಾಗದಲ್ಲಿ ಸೇತುವೆಯ ನಿರ್ಮಾಣವು ಬಹುತೇಕ … Read more

ಮಹಿಳೆಯರ ವಿವಾಹ ವಯಸ್ಸು ಏರಿಕೆ ಕುರಿತ ಮಸೂದೆ ಪರಿಶೀಲಿಸಲಿರುವ ಸಮಿತಿಯಲ್ಲಿ ಕೇವಲ ಒಬ್ಬರು ಮಹಿಳಾ ಸದಸ್ಯೆ

ಮಹಿಳೆಯರ ವಿವಾಹ ವಯಸ್ಸನ್ನು 18 ರಿಂದ 21ಕ್ಕೆ ಏರಿಸುವ ಬಾಲ್ಯ ವಿವಾಹ ತಡೆ (ತಿದ್ದುಪಡಿ) ಮಸೂದೆಯನ್ನು ಪರಾಮರ್ಶಿಸಲಿರುವ ಸಂಸದೀಯ ಸಮಿತಿಯಲ್ಲಿ ಇರುವ ಏಕೈಕ ಮಹಿಳಾ ಸದಸ್ಯೆ ತೃಣಮೂಲ ಸಂಸದೆ ಸುಷ್ಮಿತಾ ದೇವ್ ಅವರಾಗಿದ್ದಾರೆ ಎಂದು ವರದಿಯಾಗಿದೆ. ಈ ಮಸೂದೆಯನ್ನು ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಂಡಿಸಿದ್ದರು. ನಂತರ ಅದನ್ನು ಪರಿಶೀಲನೆಗಾಗಿ 31 ಸದಸ್ಯರ ಸಮಿತಿಗೆ ಸಲ್ಲಿಸಲಾಗಿತ್ತು. ಹಿರಿಯ ಬಿಜೆಪಿ ನಾಯಕ ವಿನಯ್ ಸಹಸ್ರಬುದ್ಧೆ ಅವರ ನೇತೃತ್ವದ ಈ ಸಮಿತಿಯಲ್ಲಿ ಸುಷ್ಮಿತಾ ದೇವ್ ಅವರು … Read more

ಬಿಜೆಪಿ ಸೇರಿದ್ದ ಶಾಸಕ ಬಲ್ವಿಂದರ್ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ವಾಪಸ್!

ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಪಂಜಾಬ್‌ನಲ್ಲಿ ಆರು ದಿನಗಳ ಹಿಂದೆ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಕಾಂಗ್ರೆಸ್ ಪಕ್ಷದ ಶಾಸಕ ಮಾತೃ ಪಕ್ಷಕ್ಕೆ ವೇಗವಾಗಿ ಮರಳಿದ್ದಾರೆ. ಹರಗೋವಿಂದಪುರದ ಕಾಂಗ್ರೆಸ್ ಶಾಸಕ ಬಲ್ವಿಂದರ್ ಸಿಂಗ್ ಲಡ್ಡಿ ಆರು ದಿನಗಳ ಹಿಂದೆ ಬಿಜೆಪಿ ಸೇರಿದ್ದರು. ಕಳೆದ ರಾತ್ರಿ, ಪಕ್ಷದ ಪಂಜಾಬ್ ಉಸ್ತುವಾರಿ ಹರೀಶ್ ಚೌಧರಿ ಹಾಗೂ ಉಪಮುಖ್ಯಮಂತ್ರಿ ಸುಖಜೀಂದರ್ ಸಿಂಗ್ ರಾಂಧವಾ ಅವರು ನಡೆಸಿದ ಸಣ್ಣ ಸಮಾರಂಭದಲ್ಲಿ ಅವರು ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಸಾಕಷ್ಟು ಪಕ್ಷಾಂತರಗಳು … Read more

15 ವರ್ಷ ಮೇಲ್ಪಟ್ಟ ವರಿಗೆ ಇಂದಿನಿಂದ ಲಸಿಕಾ ಅಭಿಯಾನ

ಕೋವಿಡ್-19 ಸಾಂಕ್ರಾಮಿಕದ ಮೂರನೇ ಅಲೆಯ ಸ್ಪಷ್ಟ ಸೂಚನೆ ಕಂಡುಬಂದಿರುವ ಬೆನ್ನಲ್ಲೇ, 15 ರಿಂದ 18 ವವರ್ಷ ವಯಸ್ಸಿನವರಿಗೆ ಕೋವಿಡ್-19 ವಿರುದ್ಧದ ಲಸಿಕೆ ನೀಡಿಕೆ ಇಂದಿನಿಂದ ದೇಶಾದ್ಯಂತ ಆರಂಭವಾಗಲಿದೆ. ಆದರೆ ಭಾರತ್ ಬಯೋಟೆಕ್ ದೇಶೀಯವಾಗಿ ಉತ್ಪಾದಿಸಿದ ಕೋವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ಈ ವಯೋವರ್ಗದವರಿಗೆ ನೀಡಲಾಗುತ್ತಿದೆ. ಈ ವರ್ಗಕ್ಕೆ ಲಸಿಕೆ ನೀಡುವ ಉದ್ದೇಶದಿಂದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಲಸಿಕಾ ಡೋಸ್‌ಗಳನ್ನು ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಜನವರಿ 3ರಿಂದ 15-18 ವರ್ಷದೊಳಗಿನ ಯುವಕರಿಗೆ … Read more

ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಕೊರೋನಾ ಸೋಂಕು ದೃಢ

ಫುಟ್ಬಾಲ್ ಲೋಕದ ಖ್ಯಾತ ಆಟಗಾರ ಲಿಯೋನೆಲ್ ಮೆಸ್ಸಿಗೆ ಕೊರೊನಾ ವೈರಸ್‌ ಪೊಸಿಟಿವ್ ಉಂಟಾಗಿದ್ದು, ಸ್ವಯಂ ಐಸೊಲೇಶನ್‌ಗೆ ಒಳಗಾಗಿದ್ದಾರೆ ಎಂದು ಪ್ಯಾರಿಸ್ ಸೇಂಟ್ ಜರ್ಮೈನ್(ಪಿಎಸ್‌ಜಿ) ಅಧಿಕೃತವಾಗಿ ತಿಳಿಸಿದೆ. ಫ್ರೆಂಚ್ ಕಪ್‌ನಲ್ಲಿ ವ್ಯಾನ್ನೆಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ ಸಂದರ್ಭದಲ್ಲಿ ಲಿಯೋನೆಲ್ ಮೆಸ್ಸಿ ಜೊತೆಗೆ ಹುವಾ ಬರ್ನೆಟ್, ಬ್ಯಾಕಪ್ ಗೋಲ್ಕೀಪರ್ ಸೆರ್ಗಿಯೋ ರಿಕೊ ಮತ್ತು 19 ವರ್ಷದ ಮಿಡ್‌ಫೀಲ್ಡರ್ ನಾಥನ್ ಬಿಟುಮ್ಜಾಲಾ ಎಂಬ ಆಟಗಾರರೂ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ ಎಂಬುದನ್ನು ಪಿ ಎಸ್ ಜಿ ಬಹಿರಂಗ ಪಡಿಸಿದೆ.