ಸಿಡ್ನಿ(19-11-2020): ಅಫ್ಘಾನಿಸ್ತಾನದಲ್ಲಿ ನಡೆದ ಯುದ್ಧದಲ್ಲಿ ಆಸ್ಟ್ರೇಲಿಯಾ ಸೈನಿಕರಿಂದ ಹಲವು ನಿರಪರಾಧಿ ಅಫ್ಘಾನಿಗಳು ಕೊಲೆಗೀಡಾಗಿದ್ದಾರೆ ಎಂದು ಆಸ್ಟ್ರೇಲಿಯಾ ಸೈನ್ಯದ ತನಿಖಾ ವರದಿ ಹೇಳಿದೆ.
ಸುಧೀರ್ಘ ನಾಲ್ಕು ವರ್ಷಗಳ ಕಾಲ ನಡೆದ ವಿಚಾರಣೆಯ ಬಳಿಕ ಈ ತನಿಖಾ ವರದಿ ಪೂರ್ಣಗೊಂಡಿದ್ದು, ಸೈನಿಕರು ಸುಮಾರು 39 ಅಮಾಯಕರನ್ನು ಹತ್ಯೆ ಮಾಡಿರುವುದಾಗಿ ದೃಢಪಟ್ಟಿದೆ. ಈ ವಿಚಾರವಾಗಿ ಕ್ಷಮೆ ಕೋರುವುದಾಗಿ ಆಸ್ಟ್ರೇಲಿಯಾ ಸೇನಾಧಿಕಾರಿ ಅಂಗಸ್ ಕ್ಯಾಂಪ್ಬೆಲ್ ಹೇಳಿದರು.
ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮೊರಿಸನ್ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಜೊತೆಗೆ ಫೋನಿನಲ್ಲಿ ಸಂಪರ್ಕಿಸಿ ಖೇದ ವ್ಯಕ್ತಪಡಿಸಿದರಲ್ಲದೇ, ಅಪರಾಧಿಗಳೆಂದು ದೃಢಪಟ್ಟ 25 ಸೈನಿಕರಿಗೆ ತಕ್ಕ ಶಿಕ್ಷೆ ವಿಧಿಸುವ ಭರವಸೆ ನೀಡಿದರು.