ತಮಿಳು ಮೂಲದ ಯುವತಿ ಜೊತೆ ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್​ ಮ್ಯಾಕ್ಸ್‌ವೆಲ್​ ಮದುವೆ ಫಿಕ್ಸ್​

Share on facebook
Share on twitter
Share on linkedin
Share on whatsapp
Share on telegram
Share on email
Share on print

ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೇನ್​ ಮ್ಯಾಕ್ಸ್‌ವೆಲ್ ಮತ್ತು ಭಾರತೀಯ ಮೂಲದ ವಿನಿ ರಾಮನ್​ ಅವರ ಮದುವೆ ದಿನಾಂಕ ನಿಗದಿಯಾಗಿದೆ. ಮಾರ್ಚ್​ 27ರಂದು ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ..
ಹೈದರಾಬಾದ್ : ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೇನ್​ ಮ್ಯಾಕ್ಸ್‌ವೆಲ್ ಮತ್ತು ಭಾರತೀಯ ಮೂಲದ ವಿನಿ ರಾಮನ್​ ಅವರ ಮದುವೆ ದಿನಾಂಕ ನಿಗದಿಯಾಗಿದೆ.

ಮಾರ್ಚ್​ 27ರಂದು ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ. ಈ ಹಿಂದೆ ಅಂದರೆ 2020ರಲ್ಲಿ ಮ್ಯಾಕ್ಸ್‌ವೆಲ್​ ಮತ್ತು ವಿನಿ ರಾಮನ್​ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಮ್ಯಾಕ್ಸ್​ ಮತ್ತು ತಮಿಳುನಾಡಿನ ವಿನಿ ರಾಮನ್​ ಅವರ ಮದುವೆಯ ಆಮಂತ್ರಣ ಪತ್ರಿಕೆ ಲಭ್ಯವಾಗಿದ್ದು, ಇದರಲ್ಲಿ ತಿಳಿಸಿದಂತೆ ಮೆಲ್ಬೋರ್ನ್​ನಲ್ಲಿ ಮಾ.27ರಂದು ವಿವಾಹ ಸಮಾರಂಭ ಆಯೋಜಿಸಲಾಗಿದೆ. ಭಾರತೀಯ ಸಂಪ್ರದಾಯದಂತೆ ಮದುವೆ ನಡೆಯಲಿದೆ ಎನ್ನಲಾಗಿದೆ.
 ಗ್ಲೆನ್​ ಮ್ಯಾಕ್ಸವೆಲ್ ಮತ್ತು ವಿನಿ ರಾಮನ್​ರ ಮದುವೆ ಆಮಂತ್ರಣ ಪತ್ರಿಕೆ
ವಿನಿ ರಾಮನ್​ ಅವರು ತಮಿಳು ಬ್ರಾಹ್ಮಣರಾಗಿದ್ದು, ಹುಟ್ಟಿ ಬೆಳೆದದ್ದೆಲ್ಲಾ ಮೆಲ್ಬೋರ್ನ್‌ನಲ್ಲಿ. ವಿನಿ ರಾಮನ್​ ಅವರ ಜನನಕ್ಕೂ ಮುನ್ನವೇ ಅವರ ಕುಟುಂಬಸ್ಥರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. 2017ರಲ್ಲಿ ಇಬ್ಬರ ಪರಿಚಯವಾಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು