ಉನ್ನತ ಶಿಕ್ಷಣದ ಕೇಸರೀಕರಣಕ್ಕೆ ಪ್ರಯತ್ನ! ಮೌಡ್ಯ ತುಂಬಿದ ಗೋ ವಿಜ್ಞಾನ ಅಧ್ಯಯನ

college
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೇರಳ(22-02-2020): ಅಖಿಲ ಭಾರತ ಗೋ ವಿಜ್ಞಾನ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳನ್ನು ಉತ್ತೇಜಿಸಲು ವಿಶ್ವವಿದ್ಯಾಲಯದ ಧನಸಹಾಯ ಆಯೋಗ

ಉಪಕುಲಪತಿಗಳಿಗೆ ಕಟ್ಟುನಿಟ್ಟಾಗಿ ಸೂಚನೆಯನ್ನು ನೀಡಿದ್ದು, ಈ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ ಈ ಪರೀಕ್ಷೆ ಮೂಢನಂಬಿಕೆ ಹರಡುವ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯ ಕೇಸರೀಕರಣಗೊಳಿಸುವ ಹುನ್ನಾರ ಎಂದು ಹೇಳಿದೆ.

ಕೆಎಸ್ಎಸ್ಪಿ ನಿರ್ದೇಶನವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ ಮತ್ತು ಕೆಎಸ್ಎಸ್ಪಿ ರಾಜ್ಯ ಅಧ್ಯಕ್ಷ ಎ ಪಿ ಮುಲಾರೀಧರನ್, ಉನ್ನತ ಶಿಕ್ಷಣದ ಉನ್ನತ ಸಂಸ್ಥೆ ಇಂತಹ ಅವೈಜ್ಞಾನಿಕ ಉಪಕ್ರಮಗಳನ್ನು ಉತ್ತೇಜಿಸುತ್ತಿರುವುದು ಆಘಾತಕಾರಿ ಎಂದು ಹೇಳಿದ್ದಾರೆ. ಕೇರಳದ ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳು ಯುಜಿಸಿಯ ನಿರ್ದೇಶನವನ್ನು ತಿರಸ್ಕರಿಸುವಂತೆ ಅವರು ಒತ್ತಾಯಿಸಿದ್ದಾರೆ.

ಮುಲರೀಧರನ್ ಅವರ ಪ್ರಕಾರ, ಅಧ್ಯಯನ ಪುಸ್ತಕದಲ್ಲಿ ಲಭ್ಯವಿರುವ ಹಸುವಿನ ಬಗೆಗಿನ ಮಾಹಿತಿಯು ಪ್ರಮಾದಗಳು ಮತ್ತು ಅಸಂಬದ್ಧತೆಯಿಂದ ಕೂಡಿದೆ. ಮತ್ತು ಯಾವುದೇ ವೈಜ್ಞಾನಿಕ ವಿಚಾರಗಳನ್ನು ಹೊಂದಿಲ್ಲ.

ಹಸುಗಳ ಹಾಲಿನ ಹಳದಿ ಬಣ್ಣವು ಚಿನ್ನದ ಉಪಸ್ಥಿತಿಯಿಂದಾಗಿರುತ್ತದೆ ಮತ್ತು ಹಸುವಿನ ಸಗಣಿ, ಮೂತ್ರ, ಹಾಲು, ಮೊಸರು ಮತ್ತು ತುಪ್ಪದ ಮಿಶ್ರಣವಾಗಿರುವ ಪಂಚಗವ್ಯವು  ಔಷಧೀಯ ಮೌಲ್ಯಗಳನ್ನು ಹೊಂದಿದೆ ಎಂದು ಪಠ್ಯ ಹೇಳಿದೆ. ಗೋಹತ್ಯೆಯಿಂದ ಉಂಟಾಗುವ ನೆಗೆಟಿವ್ ಶಕ್ತಿ ಭೂಕಂಪಗಳಿಗೆ ಕಾರಣವಾಗಿದೆ ಎಂದು ಪಠ್ಯದಲ್ಲಿ ಹೇಳಲಾಗಿದೆ.ಇದು ಅಸಂಬದ್ಧ . ಯುಜಿಸಿ ಇದನ್ನು ಉನ್ನತ ಶಿಕ್ಷಣದಲ್ಲಿ ಅಳವಡಿಕೆಗೆ ಸೂಚಿಸಿರುವುದು ಆಘಾತಕಾರಿಯಾಗಿದೆ ಎಂದು ಹೇಳಿದ್ದಾರೆ.

 

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು