ಬಂಟ್ವಾಳ(28/10/2020); ಇಲ್ಲಿಯ ಫರಂಗಿಪೇಟೆಯಲ್ಲಿ ಮಾರಕ ಆಯುಧಗಳೊಂದಿಗೆ ಆಗಮಿಸಿದ ತಂಡವೊಂದು ಸ್ಟುಡಿಯೊ ಒಂದರ ಮಾಲಕನ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಫರಂಗಿಪೇಟೆಯಲ್ಲಿರುವ ತೃಶಾ ಸ್ಟುಡಿಯೋ ಮಾಲಕ ದಿನೇಶ್ ದಾಳಿಗೆ ಒಳಗಾದವರು. ಗಂಭೀರ ಗಾಯಗೊಂಡಿರುವ ಅವರನ್ನು ಮಂಗಳೂರು ಖಾಸಗಿ ಅಸ್ಪತ್ರೆಗೆ ಸಾಗಿಸಲಾಗಿದೆ.
ದಿನೇಶ್ ಅವರು ಸ್ಟುಡಿಯೋ ಒಳಗೆ ಇದ್ದ ವೇಳೆ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು ದೌಡಾಯಿಸಿದ್ದಾರೆ.