ತೆಲಂಗಾಣ(13-11-2020): ತೆಲಂಗಾಣದ ಸಿರಿಸಿಲ್ಲಾದ ರಾಮೋಜಿಪೇಟದಲ್ಲಿ ದಸರ ಹಬ್ಬದ ಆಚರಣೆಯಂದು ಹಿಂದೂಗಳು ದಲಿತ ಕಾಲೋನಿ ಮೇಲೆ ದಾಳಿ ಮಾಡಿದ ಎರಡು ವಾರಗಳ ನಂತರ, ವಾಯ್ಸ್ ಆಫ್ ದಲಿತ ಕಲೆಕ್ಟಿವ್ನ ಸ್ವತಂತ್ರ ಸತ್ಯ-ಶೋಧನಾ ಸಮಿತಿಯು ವರದಿಯನ್ನು ನೀಡಿದ್ದು, ಈ ದಾಳಿ ಮಾದಿಗಾ ಕುಟುಂಬಗಳ ವಿರುದ್ಧದ ಪೂರ್ವನಿಯೋಜಿತ ಕೃತ್ಯವಾಗಿದೆ ಎಂದು ಹೇಳಿದೆ.
ಪ್ರೊಫೆಸರ್ ಕೆ ಲಕ್ಷ್ಮೀನಾರಾಯಣ, ಸಹಾಯಕ ಪ್ರಾಧ್ಯಾಪಕ ಡಾ.ಬಾಲಬೊಯಿನಾ ಸುದರ್ಶನ್ ಮತ್ತು ಡಾ.ಪಸುನೂರಿ ರವೀಂದರ್ ನೇತೃತ್ವದ ಸಮಿತಿಯು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರು ಮತ್ತು ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ವರದಿಯನ್ನು ಸಿದ್ದಪಡಿಸಿದ್ದಾರೆ.
ಅಕ್ಟೋಬರ್ನಲ್ಲಿ, ದಸರಾ ಕಾರ್ಯಕ್ರಮದ ರಾತ್ರಿಯಲ್ಲಿ ದಲಿತ ಕಾಲೋನಿಯಲ್ಲಿ ಜೋರಾಗಿ ಸಂಗೀತ ನುಡಿಸಿದಾಗ ಪ್ರಾರಂಭವಾದ ದ್ವೇಷ ಹಿಂಸಾಚಾರದಲ್ಲಿ ಕೊನೆಗೊಂಡಿತ್ತು. ಮುಧಿರಾಜ್ ಜಾತಿಗೆ ಸೇರಿದ 200 ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರು ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ.
ಸತ್ಯ ಶೋಧನಾ ವರದಿಯು 1991 ರ ಆಂಧ್ರಪ್ರದೇಶದ ಸುಂಡೂರಿನಲ್ಲಿ ದಲಿತರ ಮೇಲಿನ ದಾಳಿಗೆ ಹಿಂಸಾಚಾರವನ್ನು ಹೋಲಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಆದರೆ ಆಸ್ತಿಗಳಿಗೆ ಹಾನಿ ಮತ್ತು ದಲಿತರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಅದು ಹೇಳಿದೆ.