ಅತಿಯಾದ ಒತ್ತಡ : ಕೋವಿಡ್ ವಾರ್ಡಿನೊಳಗೆ ಯುವ ವೈದ್ಯನ ಆತ್ಮಹತ್ಯೆ | ಕೆಟ್ಟ ವಿಜ್ಞಾನ, ಕೆಟ್ಟ ರಾಜಕೀಯ, ಕೆಟ್ಟ ಆಡಳಿತ: ವೈದ್ಯಕೀಯ ಸಂಘದ ಪ್ರಮುಖ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದೆಹಲಿ: ಕೋವಿಡ್ ವಾರ್ಡಿನೊಳಗೆ ಯುವ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿದ ದಾರುಣ ಘಟನೆ ಜರುಗಿದೆ.

ದೆಹಲಿಯ ಖಾಸಗೀ ಆಸ್ಪತ್ರೆಯೊಂದರಲ್ಲಿ ಆತ್ಮಹತ್ಯೆ ಮಾಡಿದ ವೈದ್ಯರನ್ನು ಡಾ. ವಿವೇಕ್ ರಾಯ್ ಎಂದು ಗುರತಿಸಲಾಗಿದೆ. ಇವರು ಉತ್ತರ ಪ್ರದೇಶದ ಘೋರಕ್ ಪುರದ ಮೂಲದವರು.

ಕೋವಿಡ್ ಚಿಕಿತ್ಸೆಯಲ್ಲಿ ವಿಶೇಷ ದಕ್ಷತೆಯನ್ನು ಹೊಂದಿದ್ದ ಇವರು, ಪ್ರತಿದಿನವೂ ಎಂಟಕ್ಕಿಂತಲೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿದ್ದರು. ಇವರಿಂದಾಗಿ ಹಲವು ಕೋವಿಡ್ ರೋಗಿಗಳ ಪ್ರಾಣ ಕಾಪಾಡಲು ಸಾಧ್ಯವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಮಾಜಿ ಮುಖ್ಯಸ್ಥ ಡಾ. ರವಿ ವಂಗೇಡ್ಕರ್ ಹೇಳಿದ್ದಾರೆ.

ಕಣ್ಮುಂದೆಯೇ ಜನರು ಸಾವಿಗೀಡಾಗುವುದನ್ನು ಕಂಡು, ಜನರನ್ನು ಉಳಿಸಲಾಗದ ಒತ್ತಡ ತಾಳಲಾರದೇ ಅವರು ಆತ್ಮಹತ್ಯೆ ಮಾಡಿದ್ದಾರೆಂದು ಡಾ. ವಂಗೇಡ್ಕರ್ ಹೇಳುತ್ತಾರೆ.

“ಇದು ಪ್ರಾಥಮಿಕ ವೈದ್ಯಕೀಯ ಸಲಕರಣೆಗಳನ್ನೂ ಒದಗಿಸದ ವ್ಯವಸ್ಥೆಯು ಮಾಡಿದ ಕ್ರೂರ ಕೊಲೆಯಲ್ಲದೇ ಬೇರೇನೂ ಅಲ್ಲ. ಕೆಟ್ಟ ವಿಜ್ಞಾನ, ಕೆಟ್ಟ ರಾಜಕೀಯ, ಕೆಟ್ಟ ಆಡಳಿತ.” ಎಂದು ಡಾ. ವಂಗೇಡ್ಕರ್ ಟ್ವೀಟ್ ಮಾಡಿದ್ದಾರೆ.

ಯುವ ವೈದ್ಯ ವಿವೇಕ್ ರಾಯ್ ಪತ್ನಿಯು ಎರಡು ತಿಂಗಳ ಗರ್ಭಿಣಿಯಾಗಿದ್ದಾಳೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು