ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಸ್ಥಗಿತಗೊಳಿಸಿದ ದೇಶಗಳ ಸಾಲಿಗೆ ಜರ್ಮನಿ, ಇಟಲಿ, ಫ್ರಾನ್ಸ್ ಸೇರ್ಪಡೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಂಡನ್: ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆಯನ್ನು ಸ್ಥಗಿತಗೊಳಿಸಿದ ದೇಶಗಳ ಸಾಲಿಗೆ ಜರ್ಮನಿ, ಇಟಲಿ, ಫ್ರಾನ್ಸ್ಸೇರ್ಪಡೆಯಾಗಿದೆ. ಮೊದಲು ಸ್ಪೇನ್, ಪೋರ್ಚುಗಲ್, ಸ್ಲೊವೇನಿಯಾ ಮತ್ತು ಲಾಟ್ವಿಯಾ ದೇಶಗಳು ಲಸಿಕೆ ನೀಡುವುದನ್ನು ನಿಲ್ಲಿಸಿದ್ದವು.

ವಿಶ್ವ ಆರೋಗ್ಯ ಸಂಸ್ಥೆಯು ಅಸ್ಟ್ರಾಜೆನೆಕಾ ಲಸಿಕೆಗೆ ಸಮ್ಮತಿ ಸೂಚಿಸಿದ ಹೊರತಾಗಿಯೂ ಲಸಿಕೆ ನೀಡಲಾದವರಲ್ಲಿ ರಕ್ತಹೆಪ್ಪುಗಟ್ಟುವ ಲಕ್ಷಣಗಳು, ಜ್ವರ, ಎದೆನೋವು ಕಂಡುಬಂದಿದೆಯೆನ್ನಲಾಗಿದೆ.

ಬಗ್ಗೆ ಪ್ರತಿಕ್ರಿಯೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು, ಭಯ ಬೀಳುವ ಅಗತ್ಯವಿಲ್ಲ. ಇಂತಹ ಲಕ್ಷಣಗಳು, ಆರೋಗ್ಯದಲ್ಲಿನ ಏರುಪೇರುಗಳು ಕೆಲವರಲ್ಲಷ್ಟೇ ಕಂಡು ಬರುವುದು ಎಂದಿದ್ದಾರೆ.

ಹೊಸ ವಿದ್ಯಮಾನವು ವಿಶ್ವಾದ್ಯಂತ ಹತ್ತು ಹಲವು ವೈದ್ಯಕೀಯವ ಸಂಸ್ಥೆಗಳು ಜಿದ್ದಿಗೆ ಬಿದ್ದಂತೆ ತಯಾರಿಸುತ್ತಿರುವ ಕೋವಿಡ್ ಲಸಿಕೆಗಳ ದಕ್ಷತೆಯ ಕುರಿತಾಗಿ ಸಂದೇಹ ಪಡುವಂತಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು