ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಮೃತಪಟ್ಟ ಕೋರೋನೇತರ ರೋಗಿ | ರಾಜ್ಯ ರಾಜಧಾನಿಯಲ್ಲಿ ನಡೆದ ದಾರುಣ ಘಟನೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಉಸಿರಾಟ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ರೋಗಿಯೊಬ್ಬರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಾ ಕೊನೆಗೆ ಪ್ರಾಣ ಕಳಕೊಂಡ ದಾರುಣ ಘಟನೆ ನಡೆದಿದೆ.

ಕಮಲಾ ನಗರ ಮಾರುಕಟ್ಟೆಯ ಬಳಿಯಲ್ಲಿ ನಲ್ವತ್ತು ವರ್ಷದ ವ್ಯಕ್ತಿಯೊಬ್ಬರು ಉಸಿರಾಟದ ತೊಂದರೆಯಿಂದ ಬಳಲಿ ಕುಸಿದು ಬಿದ್ದಿದ್ದರು. ಇವರನ್ನು ಕಂಡ ಸ್ಥಳೀಯರು ಅಂಬ್ಯುಲೆನ್ಸಿಗೆ ಕರೆ ಮಾಡಿದರು.

ಅಂಬ್ಯುಲೆನ್ಸ್ ರೋಗಿಯನ್ನು ಹೊತ್ತು ಮಲ್ಲೇಶ್ವರಮ್ ಕೆ.ಸಿ. ಆಸ್ಪತ್ರೆಗೆ ಕೊಂಡೊಯ್ಯಿತು. ಆದರೆ ಅಲ್ಲಿ ಹಾಸಿಗೆ ಲಭ್ಯವಿರಲಿಲ್ಲ.

ನಂತರ ರೋಗಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿಯೂ ಸವಲತ್ತಿನ ಕೊರತೆಯಿಂದಾಗಿ ಜಯದೇವ ಆಸ್ಪತ್ರೆಗೆ ಸೇರಿಸಲಾಯಿತು.

ವೇಳೆಗಾಗಲೇ ರೋಗಿಯು ಗಂಭೀರಾವಸ್ಥೆಗೆ ತಲುಪಿಯಾಗಿತ್ತು. ಚಿಕಿತ್ಸೆ ನೀಡಿದರೂ ಸಮಯ ಮೀರಿದ್ದರಿಂದ ಫಲಕಾರಿಯಾಗದೇ ರೋಗಿಯು ಮೃತಪಟ್ಟಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು