ಆಸ್ಪತ್ರೆಯಿಂದ ಕೋವಿಡ್ ಲಸಿಕೆಯ ಸೀಸೆಗಳು ಕಳವು!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜೈಪುರ: ಕೋವಿಡ್ ಲಸಿಕೆ ಕಳವಾಗಿರುವ ಘಟನೆ ವರದಿಯಾಗಿದೆ. ಜೈಪುರದ ಶಾಸ್ತ್ರಿ ನಗರದಲ್ಲಿರುವ ಕಾನ್ವಾತಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಕಳವು ನಡೆದಿದ್ದು, ಪೋಲೀಸರಿಗೆ ದೂರು ನೀಡಲಾಗಿದೆ.

ಆಸ್ಪತ್ರೆಯ ಕೋಲ್ಡ್ ಸ್ಟೋರೇಜ್ ನಿಂದ ಲಸಿಕಾ ಕೇಂದ್ರಕ್ಕೆ ಸಾಗಿಸುವ ದಾರಿಯಲ್ಲಿ ಕಳವು ನಡೆದಿದೆ ಎಂಬ ಶಂಕೆ ಪಡಲಾಗಿದೆ.

ಸುಮಾರು 320 ಡೋಸುಗಳನ್ನು ಹೊಂದಿದ 32 ಸೀಸೆಗಳು ಕಾಣೆಯಾಗಿದೆ. ಲಸಿಕೆಯು ಕೊರತೆಯಿರುವ ಸನ್ನಿವೇಶದಲ್ಲಿ ಕಳವು ನಡೆದಿರುವುದು ನಮ್ಮನ್ನು ಆತಂಕಕ್ಕೀಡಾಗಿಸಿದೆ ಎಂದು ಆಸ್ಪತ್ರೆ ಸಿಬ್ಬಂದಿಗಳು ಹೇಳಿದ್ದಾರೆ.

ದೇಶಾದ್ಯಂತ ಲಸಿಕೆಗಳ ಕೊರತೆ ಕಂಡು ಬಂದಿದೆಯಾದರೂ ಇದ್ದುದರಲ್ಲಿ ರಾಜಸ್ತಾನವು ಲಸಿಕೆ ವಿತರಣೆಯಲ್ಲಿ ಎರಡನೇಯ ಸ್ಥಾನದಲ್ಲಿದೆ. ಈಗಾಗಲೇ ಹತ್ತು ಮಿಲಿಯನ್ ಡೋಸುಗಳಿಗಿಂತ ಹೆಚ್ಚು ಲಸಿಕೆಗಳನ್ನು ಜನರಿಗೆ ನೀಡಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು