ಊರಿಗೆ ಬಂದರೂ ಕೈಗೆ ಸಿಗದ ಸಚಿವ ಆರ್.ಅಶೋಕ್; ರೈತರ ಅಸಮಾಧಾನ

r ashok
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಳಗಾವಿ(19/10/2020): ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿರುವ ಚಿಕ್ಕೋಡಿ ತಾಲ್ಲೂಕಿಗೆ ಇಂದು ಭೇಟಿ ನೀಡಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರು ಊರಿಗೆ ಬಂದಿದ್ದರೂ ತಮ್ಮ ಅಹವಾಲುಗಳನ್ನು ಆಲಿಸದೆ ಹೋದದ್ದು ರೈತರ ಸಿಟ್ಟಿಗೆ ಕಾರಣವಾಗಿದೆ.  “ನಮ್ಮ  ಸಮಸ್ಯೆ ಆಲಿಸದೆ ಕೃಷ್ಣಾ ನದಿಯಲ್ಲಿ ಬೋಟಿನಲ್ಲಿ ಸುತ್ತಾಡಿ ಹೋಗಿದ್ದಾರೆ’ ಎಂದು ಸ್ಥಳೀಯ ರೈತರು ಅಸಮಾಧಾನ ಹೊರಹಾಕಿದ್ದಾರೆ.

ರೈತರು  ಬೆಳೆ ಹಾನಿ ಪರಿಶೀಲನೆ ಮಾಡಿ, ಸಮಸ್ಯೆಗಳನ್ನು ಆಲಿಸುತ್ತಾರೆಂದು ಈ ಭಾಗದ ರೈತರು ನಿರೀಕ್ಷಿಸಿದ್ದರು. ಆದರೆ, ಸಚಿವರು ಬಂದಾ ಪುಟ್ಟ ಹೋದಾ ಪುಟ್ಟ ಎಂಬಂತೆ ಕೇವಲ  ಕೃಷ್ಣಾ ನದಿ ತೀರದಲ್ಲಿ ಬೋಟ್‍ ಮೂಲಕ ಪ್ರವಾಹದ ಪರಿಸ್ಥಿತಿ ಅವಲೋಕಿಸಿಯಷ್ಟೇ ಹೋಗಿರುವುದು ಸರಿಯಾದ ವರ್ತನೆಯಲ್ಲ ಎಂದು ರೈತರು ಆರೋಪಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು