ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧವಾಗಿ ‘ಮಹಾನಾಯಕ’ ಎನ್ನುವ ಪದವನ್ನು
ಮಾಧ್ಯಮಗಳು ಯಥೇಚ್ಛವಾಗಿ ಬಳಸುತ್ತಿರುವುದಕ್ಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೀಯ ವ್ಯಕ್ತವಾಗುತ್ತಿದೆ.
ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ. “ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಗೆ ಗೌರವದಿಂದ #ಮಹಾನಾಯಕ ಅಂತಿದ್ರು!ಈಗ CDಮಾಡೋರನ್ನ #ಮಹಾನಾಯಕ ಅಂತಿದ್ದಾರೆ!ಯಾವಪದ ಯಾರಿಗೆ ಬಳಸಬೇಕು ಅನ್ನೋ ಕನಿಷ್ಟಜ್ಞಾನ ಬೇಡ್ವಾ ನಿಮ್ಗೆ?ಅಂಬೇಡ್ಕರ್ ಫೋಟೋ ವಿರೂಪವಾದಾಗ ಅಗೌರವ ಆಗಲ್ಲ,ಇಂತ ಪದಗಳನ್ನ ಅಶ್ಲೀಲCDಕೇಸ್ ನವರಿಗೆ ಬಳಸಿದ್ರೆ ಅವಮಾನ ಮಾಡಿದಂತೆ!ಇನ್ನೊಮ್ಮೆ ಮಹಾನಾಯಕ ಅಂದ್ರೆ ಮುಖಕ್ಕೆಉಗೀರಿ!” ಎಂದು ಒಳ್ಳೆ ಹುಡುಗ ಪ್ರಥಮ್ ಟ್ವೀಟ್ ಮಾಡಿದ್ದಾರೆ.
ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಗೆ ಗೌರವದಿಂದ #ಮಹಾನಾಯಕ ಅಂತಿದ್ರು!ಈಗCDಮಾಡೋರನ್ನ #ಮಹಾನಾಯಕ ಅಂತಿದ್ದಾರೆ!ಯಾವಪದ ಯಾರಿಗೆ ಬಳಸಬೇಕು ಅನ್ನೋ ಕನಿಷ್ಟಜ್ಞಾನ ಬೇಡ್ವಾ ನಿಮ್ಗೆ?ಅಂಬೇಡ್ಕರ್ ಫೋಟೋ ವಿರೂಪವಾದಾಗ ಅಗೌರವ ಆಗಲ್ಲ,ಇಂತ ಪದಗಳನ್ನ ಅಶ್ಲೀಲCDಕೇಸ್ ನವರಿಗೆ ಬಳಸಿದ್ರೆ ಅವಮಾನ ಮಾಡಿದಂತೆ!ಇನ್ನೊಮ್ಮೆ ಮಹಾನಾಯಕ ಅಂದ್ರೆ ಮುಖಕ್ಕೆಉಗೀರಿ!
— Olle Hudga Pratham (@OPratham) March 28, 2021
‘ಮಹಾನಾಯಕ’ ಎಂಬ ಬಿರುದು ಇರುವುದು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಮಾತ್ರ, ಇದು ಇಡೀ ದೇಶಕ್ಕೆ ತಿಳಿದಿರುವ ಸಂಗತಿಯೇ, ಆದರೆ ಮಾಧ್ಯಮಗಳು ಪದೇ ಪದೇ ಸಿಡಿ ಪ್ರಕರಣ ವಿಚಾರದಲ್ಲಿ ಮಾಹಾನಾಯಕ ಪದ ಬಳಕೆ ಮಾಡುತ್ತಿದ್ದಾರೆ. ಇದು ಅಂಬೇಡ್ಕರ್ ರವರ ತತ್ವ ಸಿದ್ಧಾಂತ ನಂಬಿರುವ ಅನುಯಾಯಿಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ನೀಚ ಕೃತ್ಯ. ಇದು ಪ್ರಜ್ಞಾವಂತರು ಒಕ್ಕೊರಲವಾಗಿ ಖಂಡಿಸಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ BalajiMkambale ಎನ್ನುವರು ತಮ್ಮ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಹಾಕಿದ್ದಾರೆ. ಇದಕ್ಕೆ ಹಲವು ಪ್ರಜ್ಞಾವಂತರು ಬೆಂಬಲ ಸೂಚಿಸಿ ಖಂಡಿಸುತ್ತಿದ್ದಾರೆ.
ಈಗಾಗಲೇ ‘ಜೀ ಕನ್ನಡ’ ಚಾನೆಲ್ ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಬದುಕು ಮತ್ತು ಹೋರಾಟ ಕುರಿತಾದ ‘ಮಹಾನಾಯಕ’ ಧಾರವಾಹಿ ಪ್ರಸಾರವಾಗುತ್ತಿದೆ. ಜಾತಿ ಮತ ಭೇದವಿಲ್ಲದೆ ಎಲ್ಲರೂ ತಪ್ಪದೇ ವೀಕ್ಷಿಸುತ್ತಿದ್ದಾರೆ. ನೂರಾರು ಹಳ್ಳಿ ಪಟ್ಟಣಗಳಲ್ಲಿ ‘ಮಾಹಾನಾಯಕ ‘ ಬ್ಯಾನರ್ ಗಳು ಇಂದಿಗೂ ರಾರಾಜಿಸುತ್ತಿವೆ. ಅಷ್ಟೊಂದು ಪ್ರಸಿದ್ಧಿ ಪಡೆದಿರುವ ಕನ್ನಡದ ಮೊದಲ ಧಾರವಾಹಿ ಎಂದರೂ ತಪ್ಪಾಗಲಾರದು.
ದೇಶದ ಸಂವಿಧಾನ ಶಿಲ್ಪಿಯನ್ನು ಮಾತ್ರ ‘ಮಹಾನಾಯಕ’ ಎಂದು ಕರೆಯಬಹುದು. ಆದರೆ ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡುವರಿಗೆ, ಅಶ್ಲೀಲ ಸಿಡಿ ಪ್ರಕರಣದ ಆರೋಪಿಗಳನ್ನು ‘ಮಹಾನಾಯಕ’ ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ, ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ‘ಮಹಾನಾಯಕ’ ಪದ ಬಳಕೆ ಮಾಡುವುದು ಖಂಡನೀಯ ಎಂದು ಪ್ರಜ್ಞಾವಂತ ನಾಗರೀಕರು ಒತ್ತಾಯಿಸುತ್ತಿದ್ದಾರೆ.