ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ‘ಸ್ವತಂತ್ರ ಸಾಕ್ಷಿ’ ಕಿರಣ್ ಗೋಸಾವಿ ಪುಣೆಯಲ್ಲಿ ಬಂಧನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬೈ: ಮುಂಬೈ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಏಜೆನ್ಸಿಯ ವಿವಾದಾತ್ಮಕ “ಸ್ವತಂತ್ರ ಸಾಕ್ಷಿ” ಕಿರಣ್ ಗೋಸಾವಿಯನ್ನು ಇಂದು ಪುಣೆಯಲ್ಲಿ ಬಂಧಿಸಲಾಗಿದೆ.

ತಲೆ ಮರೆಸಿಕೊಂಡಿದ್ದ ಕಿರಣ್ ಗೋಸಾವಿ ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಪೊಲೀಸ್ ಠಾಣೆಯಲ್ಲಿ ಶರಣಾಗುವುದಾಗಿ ಹೇಳಿಕೊಂಡಿದ್ದ, ಮೂರು ದಿನಗಳ ನಂತರ ಆತನನ್ನು ಬಂಧಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

2019 ರಲ್ಲಿ ಪುಣೆ ಸಿಟಿ ಪೊಲೀಸರು ಆತನನ್ನು ಬೇಕಾಗಿದ್ದಾರೆ ಎಂದು ಘೋಷಿಸಿದರು. ಅಂದಿನಿಂದ ಅವನು ಕಾಣೆಯಾಗಿದ್ದನು ಮತ್ತು ಎನ್ ಸಿ ಬಿ ಸಾಕ್ಷಿಯಾಗಿ ಕ್ರೂಸ್ ದಾಳಿಯ ಸಮಯದಲ್ಲಿ ಮಾತ್ರ ಗುರುತಿಸಲಾಗಿತ್ತು. ಅಕ್ಟೋಬರ್ 14 ರಂದು ಪೊಲೀಸರು ಆತನ ವಿರುದ್ಧ ಲುಕೌಟ್ ಸುತ್ತೋಲೆ ಹೊರಡಿಸಿದ್ದರು.

ಕಿರಣ್ ಗೋಸಾವಿ ಈ ತಿಂಗಳ ಆರಂಭದಲ್ಲಿ ಕ್ರೂಸ್ ಹಡಗು ದಾಳಿಯ ಸಮಯದಲ್ಲಿ ಹಾಜರಿದ್ದ ಹಾಗೂ ನಂತರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಥವಾ ಎನ್ಸಿಬಿ ಕಚೇರಿಯಲ್ಲಿ ಆರ್ಯನ್ ಖಾನ್ ಅವರೊಂದಿಗೆ ಹಾಜರಿದ್ದ. ಎರಡೂ ಸ್ಥಳಗಳಲ್ಲಿ ಆರ್ಯನ್ ಖಾನ್ ಅವರೊಂದಿಗಿನ ಗೋಸಾವಿ ಸೆಲ್ಫಿ ಮತ್ತು ವೀಡಿಯೊಗಳು ವೈರಲ್ ಆಗಿದ್ದವು. ಈ ಕಾರಣದಿಂದ ಆತನ ಬಂಧನವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು