ಶಬ್ನಮ್ ಗಲ್ಲಿಗೆ ಸಿದ್ದವಾಗುತ್ತಿದೆ ಕುಣಿಕೆ| ಸ್ವತಂತ್ರ ಭಾರತದಲ್ಲಿ ಗುಲ್ಲುಶಿಕ್ಷೆಗೆ ಗುರಿಯಾದ ಮೊದಲ ಮುಸ್ಲಿಂ ಮಹಿಳೆ ಶಬ್ನಮ್ ….

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಕೈದಿಗೆ ಗಲ್ಲಿಗೇರಿಸಲು ನೇಣು ಕುಣಿಕೆ ಸಿದ್ದವಾಗಿದೆ. ಈ ಮೊದಲು 5 ಮಕ್ಕಳ ಕಳ್ಳತನ ಮತ್ತು ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾ ಸಿಂಧೆ ಮತ್ತು ಸೀಮಾ ಗೇವಿಟ್ ಎಂಬಿಬ್ಬರು ಸಹೋದರಿಯರಿಗೆ ಗಲ್ಲು ಶಿಕ್ಷೆ ವಿಧಿಸಿ ಭಾರತೀಯ ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿತ್ತು. ಈ ಇಬ್ಬರು ಆರೋಪಿಗಳ ಕ್ಷಮಾಪಣಾ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ಸ್ವತಂತ್ರ ಭಾರತದಲ್ಲಿ ಹಲವಾರು ಪುರುಷರಿಗೆ ಅಪರಾಧಕ್ಕೆ ಸಂಬಂಧಿಸಿದಂತೆ ಗಲ್ಲು ಶಿಕ್ಷೆಯನ್ನು ವಿಧಿಸಿರುವುದನ್ನು ನಾವು ಗಮನಿಸಿದ್ದೇವೆ. ಭಯೋತ್ಪಾದನಾ ಕೃತ್ಯ, ಅತ್ಯಾಚಾರ, ಸೀರಿಯಲ್ ಮರ್ಡರ್ ಕೃತ್ಯಕ್ಕೆ ಸಂಬಂಧಿಸಿದಂತೆ ಹಲವರಿಗೆ ಗಲ್ಲುಶಿಕ್ಷೆಯಾಗಿದೆ. ಅಜ್ಮಲ್ ಖಸಬ್, ಅಫ್ಜಲ್ ಗುರು,  ದೆಹಲಿಯ ನಿರ್ಭಯಾ ಅತ್ಯಾಚಾರದ ಆರೋಪಿಗಳು,  ಸೀರಿಯಲ್  ಕಿಲ್ಲರ್ ಸೈಕೋ ಶಂಕರ್ ಇವೆಲ್ಲಾ ಕೆಲ ನೆನಪಿನಲ್ಲಿರುವ ಉದಾಹರಣೆಗಳು. ಆದರೆ ನೇಣು ಗಂಬಕ್ಕೆ ಏರಿದ ಅಪರಾಧಿಗಳ ದೊಡ್ಡ ಲಿಸ್ಟ್ ಇದೆ.

ಶಬ್ನಂ ಸಧ್ಯ ಭಾರತದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮುಸ್ಲಿಂ ಮಹಿಳೆ. ಈಕೆಯ ತನ್ನ ಕುಟುಂಬದ 7 ಸದಸ್ಯರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಈಕೆಯ ಅಪರಾಧ ಸಾಭೀತಾಗಿದೆ. ಅಮ್ರೋಹಾದಲ್ಲಿ ವಾಸಿಸುತ್ತಿರುವ ಶಬ್ನಮ್ ಪ್ರಯಕರನಿಗಾಗಿ ಕುಟಂಬದ ಸದಸ್ಯರನ್ನು ಹತ್ಯೆ ಮಾಡಿದ್ದಾಳೆ.

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ, ಶಬ್ನಮ್ ಮತ್ತು ಸಲೀಮ್ ಪರಸ್ಪರ ಪ್ರೀತಿಸುತ್ತಿದ್ದರು. ಅವರ ಪ್ರೇಮಕ್ಕೆ ಕುಟುಂಬದ ಸದಸ್ಯರು ವಿರೋಧವನ್ನು ವ್ಯಕ್ತಪಡಿಸಿದ್ದರು. ಇದರಿಂದ ಕೋಪಗೊಂಡಿದ್ದ ಶಬ್ನಂ, ಸಲೀಂ ಜೊತೆ ಸೇರಿ ಏಪ್ರಿಲ್ 15, 2008 ರಂದು ಕುಟುಂಬದ 7 ಸದಸ್ಯರ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಿದ್ದಳು. ಮುಹೂರ್ತದಂತೆ   ಏ.15ರ ರಾತ್ರಿ  ಹಾಲಿಗೆ ನಿದ್ರೆ ಮಾತ್ರೆಯನ್ನು ಹಾಕಿ ಶಬ್ನಂ ಮೆನೆಯಲ್ಲಿದ್ದ 7 ಮಂದಿಗೆ ನೀಡಿದ್ದಾರೆ. ಈ ವೇಳೆ ನಿದ್ರೆಗೆ ಜಾರಿದ್ದ ಕುಟುಂಬಸ್ಥರನ್ನು ಪ್ರಿಯತಮ ಸಲೀಂ ಜೊತೆ ಸೇರಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾಳೆ.

ಘೋರ ಕೃತ್ಯವನ್ನು ಮನಗಂಡ ಸೆಷನ್ಸ್ ನ್ಯಾಯಾಲಯ ಅವರಿಗೆ ಮೊದಲು ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆದಾಗ್ಯೂ, 2010 ರಲ್ಲಿ, ಅವರು ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು ಆದರೆ ಸೆಷನ್ಸ್ ನ್ಯಾಯಾಲಯವು ಅವರಿಗೆ ನೀಡಿದ್ದ ಮರಣದಂಡನೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ನಂತರ ಅವರು ಸುಪ್ರೀಂ ಕೋರ್ಟ್‌ಗೆ ಮನವಿಯನ್ನು ಸಲ್ಲಿಸಿದ್ದರು ಆದರೆ ಗಲ್ಲು ಶಿಕ್ಷೆಯಲ್ಲಿ ಸುಪ್ರಿಂ ಕೋರ್ಟ್ ಕೂಡ ಯಾವುದೇ ರಿಯಾಯಿತಿಯನ್ನು ನೀಡದೆ ಶಬ್ನಂ ಮನವಿಯನ್ನು ತಿರಸ್ಕರಿಸಿದೆ. ಇದರ ಬೆನ್ನಲ್ಲೇ ಶಬ್ನಂ ರಾಷ್ಟ್ರಪತಿಗೆ ಕ್ಷಮಾಪಣಾ ಅರ್ಜಿಯನ್ನು ಸಲ್ಲಿಸಿದ್ದರು. ರಾಷ್ಟ್ರಪತಿ ಕೋವಿಂದ್ ಶಬ್ನಂ ಅವರ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಇದರ ಬೆನ್ನಲ್ಲೇ ಶಬ್ನಂ ಗಲ್ಲಿಗೇರಿಸಲು ಸಿದ್ಥತೆ ನಡೆಸಲಾಗುತ್ತಿದೆ. ಈ ಬಗ್ಗೆ ಜೈಲು ಅಧೀಕ್ಷಕ ಶೈಲೇಂದ್ರ ಕುಮಾರ್ ಮೈತ್ರೇಯ ಹೇಳಿಕೆಯನ್ನು ಈಗಾಗಲೇ ನೀಡಿದ್ದಾರೆ. ಶಬ್ನಂ ಗಲ್ಲಿಗೇರಿಸುವ ಪ್ರಕ್ರಿಯೆಗೆ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿದ ಪವನ್ ಪರಿಶೀಲನೆಯನ್ನು ಕೂಡ ನಡೆಸುತ್ತಿದ್ದಾರೆ. ಈ ಮೂಲಕ 150 ವರ್ಷಗಳ ಇತಿಹಾಸದಲ್ಲಿ ಮಥುರಾ ಜೈಲಿನಲ್ಲಿ ಮೊದಲ ಮಹಿಳೆಗೆ ಗಲ್ಲು ಶಿಕ್ಷೆಯನ್ನು ನೀಡಲಾಗುತ್ತಿದೆ. ಗಲ್ಲು ಶಿಕ್ಷೆಗೆ ದಿನಾಂಕವನ್ನು ನಿಗದಿ ಪಡಿಸಿಲ್ಲ. ಆದರೆ ಘೋರ ಕೃತ್ಯ ನಡೆಸಿದ ಶಬ್ನಂಗೆ ಗಲ್ಲು ಖಚಿತವಾಗಿದೆ.