ಉದ್ಯೋಗಿಗಳಿಗೆ ವೇತನ ನೀಡಲು ಹಣದ ಕೊರತೆ | ಪ್ರತಿಷ್ಠಿತ ಹೋಟೆಲ್ ಹಯಾತ್ ರಿಜೆನ್ಸಿ ಬಂದ್.‍.

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬಯಿ: ಉದ್ಯೋಗಿಗಳಿಗೆ ವೇತನ ನೀಡಲು ಸಾಧ್ಯವಾಗದೇ ಪ್ರಸಿದ್ಧ ಮತ್ತು ಪ್ರತಿಷ್ಠಿತ ಹೋಟೆಲ್ ಹಯಾತ್ ರಿಜೆನ್ಸಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಕೋವಿಡ್ ಸಂದಿಗ್ಧತೆಯ ಕಾರಣದಿಂದ ಇತ್ತೀಚಿಗಿನ ದಿನಗಳಲ್ಲಿ ಹೋಟೆಲ್ ನಷ್ಟದಿಂದ ನಡೆಯುತ್ತಿತ್ತು ಎನ್ನಲಾಗಿದೆ.

ಉದ್ಯೋಗಿಗಳಿಗೆ ವೇತನ ನೀಡಲು ಸೇರಿದಂತೆ, ಖರ್ಚು ವೆಚ್ಚಗಳನ್ನು ಸರಿದೂಗಿಸಲು ಸಾಧ್ಯವಾಗಲಿಲ್ಲ ಎಂದು ಹೋಟೆಲ್ ನಿರ್ವಾಹಕರು ತಿಳಿಸಿದ್ದಾರೆ. ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರವೇ ಇರುವ ಹೋಟೆಲ್ಏಸಿಯನ್ ವೆಸ್ಟ್ ಲಿಮಿಟೆಡ್ಎಂಬ ಸಂಸ್ಥೆಯ ಮಾಲಕತ್ವದಲ್ಲಿತ್ತು.

ಏಸಿಯನ್ ವೆಸ್ಟ್ ಲಿಮಿಟೆಡ್ಸಂಸ್ಥೆ ಕೂಡಾ ಹೋಟೆಲನ್ನು ಮುನ್ನಡೆಸಲು, ಉದ್ಯೋಗಿಗಳಿಗೆ ವೇತನ ನೀಡಲು ಬೇಕಾಗಿರುವ ಹಣವನ್ನು ಕಳುಹಿಸಿ ಕೊಟ್ಟಿರಲಿಲ್ಲ. ಹೀಗಾಗಿ ಹೋಟೆಲ್ ನಡೆಸುವುದು ಬಹಳ ಕಷ್ಟಕರವಾಯಿತು. ಸದ್ಯ ಮುಚ್ಚುವುದೇ ಸೂಕ್ತವೆಂದು ತೀರ್ಮಾನಿಸಿದೆವು ಎಂದು ಹೋಟೆಲಿನ ಪ್ರಧಾನ ವ್ಯವಸ್ಥಾಪಕರಾದ ಹರ್ದೀಪ್ ಮಾರ್ವಾಶ್ ತಿಳಿಸಿದ್ದಾರೆ.

ನಾವು ತಾತ್ಕಾಲಿಕವಾಗಿ ಹೋಟೆಲಿನ ಎಲ್ಲಾ ಕೆಲಸಕಾರ್ಯಗಳನ್ನು ನಿಲ್ಲಿಸಿದ್ದೇವೆ. ಹೊಸದಾಗಿ ಯಾವುದೇ ಬುಕ್ಕಿಂಗ್ ತೆಗೆದುಕೊಳ್ಳುತ್ತಿಲ್ಲ. ಪರಿಸ್ಥಿತಿಯನ್ನು ಹಿಮ್ಮೆಟ್ಟಿಸುವ ಸಲುವಾಗಿ ಮಾಲಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಸಂಸ್ಥೆಯ ಉಪಾಧ್ಯಕ್ಷ ಸಂಜಯ್ ಶರ್ಮಾ  ತಿಳಿಸಿದ್ದಾರೆ.

ಭಾರತದಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಲು ತೊಡಗಿದಂದಿನಿಂದ ಸಾರಿಗೆ ಸಂಪರ್ಕ, ಪ್ರವಾಸೋದ್ಯಮ ಇತ್ಯಾದಿ ಕ್ಷೇತ್ರಗಳು ಕುಸಿಯುತ್ತಾ ಸಾಗಿದೆ. ಇದು ಹೋಟೆಲ್ ಉದ್ಯಮವನ್ನೂ ಬಾಧಿಸಿದ್ದು, ಹಲವಾರು ಸಣ್ಣ, ದೊಡ್ಡ ಹೋಟೆಲುಗಳು ತಮ್ಮ ಕೆಲಸಕಾರ್ಯವನ್ನು ಸ್ಥಗಿತಗೊಳಿಸಿವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು