ತುಂಗಾನಗರ ಪೋಲಿಸರ ಮಿಂಚಿನ ಕಾರ್ಯಚರಣೆ| ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತಿದ್ದ ರೌಡಿ ಶೀಟರ್ ಬಂಧನ

man arrested
Share on facebook
Share on twitter
Share on linkedin
Share on whatsapp
Share on telegram
Share on email
Share on print

ಶಿವಮೊಗ್ಗ (09-11-2020): ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಪಿಎಸ್ಐ ತಿರುಮಲೆಶ್ ಜಿ.ಹಾಗೂ ತಂಡವು ರೌಡಿ ಶೀಟರ್ ಕಡೇಕಲ್ ಅಬೀದ್ ನನ್ನು ಬಂಧಿಸಿದ್ದಾರೆ.

ಗಾಂಜಾವನ್ನ ಸಂಗ್ರಹಿಸಿ ಮಾರುತ್ತಿದ್ದ  ಎಂಬ ಆರೋಪದ ಮೇರೆಗೆ ರೌಡಿ ಶೀಟರ್ ಆಗಿರುವ ಕಡೇಕಲ್ ಅಬೀದನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ರೌಡಿ ಶೀಟರ್ ಕಡೇಕಲ್ ಅಬೀದ್ ಇಂದಿರಾ ನಗರದ ಶ್ರೀರಾಮ್ ನಗರಕ್ಕೆ ಹೋಗುವ ರಸ್ತೆಯ ಪಕ್ಕದ ಲೇಔಟ್ ನಲ್ಲಿ ಗಾಂಜಾವನ್ನ ಸಂಗ್ರಹಿಸಿಕೊಂಡು ಸಾರ್ವಜನಿಕರಿಗೆ  ಮಾರುತ್ತಿದ್ದ . ಡಿವೈಎಸ್ಪಿ ಉಮೇಶ್ ಈಶ್ವರ್ ನಾಯಕ್, ಸಿಪಿಐ ಸಂಜೀವ್ ಕುಮಾರ್ ಮಾರ್ಗದರ್ಶನದಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಮತ್ತು ಅವರ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆತನನ್ನ ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ 90 ಸಾವಿರ ರೂ ಮೌಲ್ಯದ 1.100 ಗ್ರಾಂ ಕೆ.ಜಿ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ.

ಈತನ ವಿರುದ್ದ ಶಿವಮೊಗ್ಗದ ದೊಡ್ಡಪೇಟೆ, ತುಂಗಾಠಾಣೆ, ಸಾಗರ ರೂರಲ್, ಭದ್ರಾವತಿಯ ಠಾಣೆಗಳು ಸೇರಿದಂತೆ ಇತರೆ ಠಾಣೆಗಳಲ್ಲಿಯೂ  ಹಲವಾರು ಪ್ರಕರಣಗಳು ದಾಖಲಾಗಿವೆ. ಕಾರ್ಯಚರಣೆ ತಂಡದಲ್ಲಿ ಸೋಮಾ ನಾಯ್ಕ, ಸಂತೋಷ್, ಲಿಂಗರಾಜ್, ಅರುಣ್ ಕುಮಾರ್, ಲಂಕೇಶ್, ಪ್ರಶಾಂತ್ ಕುಮಾರ್, ಅರುಣ್, ಹರಿಯಂತ್, ಗುರುನಾಯ್ಕ್, ಸಯ್ಯದ್ ಇಮ್ರಾನ್, ರಾಜು, ಚಂದ್ರಾನಾಯಕ್ ಭಾಗಿಯಾಗಿದ್ದರು.

ವರದಿ: ಕೋಗಲೂರು ಕುಮಾರ್

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು