ಆರೋಪಿಯನ್ನು ರಕ್ಷಿಸುವುದಕ್ಕಾಗಿ ಸರಕಾರವು ಲಾಕ್ಡೌನ್ ಹೇರಲಿದೆಯೆಂಬ ಊಹಾಪೋಹಗಳಿವೆ: ಸಿಡಿ ಸಂತ್ರಸ್ತೆ ಪರ ವಕೀಲರು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಆರೋಪಿಯನ್ನು ರಕ್ಷಿಸುವುದಕ್ಕಾಗಿ ಸರಕಾರವು ಸೋಮವಾರದಿಂದ ಲಾಕ್ಡೌನ್ ಹೇರಲಿದೆಯೆಂಬ ಊಹಾಪೋಹಗಳಿವೆ ಎಂದು ಅಶ್ಲೀಲ ಸಿಡಿ ಸಂತ್ರಸ್ತೆ ಪರ ವಕೀಲ ಕೆ. ಎನ್ ಜಗದೀಶ್ ಹೇಳಿದ್ದಾರೆ. ಅವರು ಇಂದು ರಾತ್ರಿ ಒಂಭತ್ತರ ಹೊತ್ತಿಗೆ ಫೇಸ್ಬುಕ್ ಲೈವ್ ನಲ್ಲಿ ಮಾತನಾಡಿ ವಿಚಾರವನ್ನು ತಿಳಿಸಿದ್ದಾರೆ.

ತಮ್ಮ ಎಂದಿನ ಜೊತೆಗಾರ ಮಂಜುನಾಥ್ ಅವರ ಜೊತೆಗೆಕಣ್ಣಿಗೆ ಕಾಣದ ನಾಟಕಕಾರ ನಿನಗೆ ನನ್ನ ನಮಸ್ಕಾರ..’ ಎಂಬ ಹಾಡು ಗುಣುಗುತ್ತಾ ಫೇಸ್ಬುಕ್ ಲೈವ್ ಆರಂಭಿಸಿ, ಮಾತನಾಡಿದ ವಕೀಲ ಜಗದೀಶ್ ಅವರು, ಮಂಗಳವಾರದಂದು ಅಶ್ಲೀಲ ಸಿಡಿ ಪ್ರಕರಣದ ಆರೋಪಿಯನ್ನು ಎಸ್ಐಟಿ ಯವರು ಕರೆದಿದ್ದಾರೆ. ಇದನ್ನು ತಪ್ಪಿಸುವುದಕ್ಕಾಗಿ ಸರಕಾರವು ಸೋಮವಾರದಿಂದ ಲಾಕ್ಡೌನ್ ಹೇರಲಿದೆಯೆಂಬ ಊಹಾಪೋಹಗಳಿವೆ ಎಂದು ಎಂದರು. ಯಾರೋ ಒಬ್ಬರನ್ನು ರಕ್ಷಿಸುವುದಕ್ಕಾಗಿ ಆರು ಕೋಟಿ ಕನ್ನಡಿಗರ ಮೇಲೆ ಲಾಕ್ಡೌನ್ ಮಾಡಬೇಡಿ ಎಂದು ಸಲಹೆ ನೀಡಿದರು. ಲಾಕ್ಡೌನ್ ಹೇರುತ್ತಾರೆಂಬ ನಂಬಿಕೆ ನಮಗಿಲ್ಲ. ಆದರೆ ಊಹಾಪೋಹಗಳನ್ನು ನಿಜ ಮಾಡಬೇಡಿ ಎಂದಿದ್ದಾರೆ.

ನೀವು ಲಾಕ್ಡೌನ್ ಮಾಡುವುದಾದರೆ ಮಾಡಿ. ಆದರೆ ಲಾಕ್ಡೌನ್ ಮಾಡುವ ಮೊದಲು ಆರು ಕೋಟಿ ಕನ್ನಡಿಗರನ್ನು ಒಳಗೊಂಡಿರುವ ಸುಮಾರು ಎರಡು ಕೋಟಿ ಕುಟುಂಬಗಳು ಕರ್ನಾಟಕದಲ್ಲಿವೆ. ಪ್ರತಿ ಕುಟುಂಬದ ಖಾತೆಗೂ ಹತ್ತತ್ತು ಸಾವಿರ ರೂಪಾಯಿಗಳನ್ನು ಹಾಕಿ ನಂತರ ಲಾಕ್ಡೌನ್ ಮಾಡಿ. ಮತ್ತೆ ನೀವು ಖಾಸಗೀ ಆಸ್ಪತ್ರೆಗಳಲ್ಲಿ ಮಲಗಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸೂಚ್ಯವಾಗಿ ತರಾಟೆಗೆ ತೆಗೆದುಕೊಂಡರು.

ನೀವೇನು ನಿಮ್ಮ ಸ್ವಂತ ದುಡ್ಡು ಕೊಡುವುದಲ್ಲ, ನಾವೇ ಕಟ್ಟಿದ ತೆರಿಗೆ ದುಡ್ಡು ಇದೆ.  ಕೇಂದ್ರ ಸರಕಾರವು ಕೊಡಲು ಬಾಕಿಯಿರುವ ಜಿಎಸ್ಟಿ ದುಡ್ಡು ಇದೆ. ಕೊರೋನಾದಿಂದ ಜನ ಸಾಯ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ನೀವು ದುಡ್ಡು ಹಾಕದೇ ಲಾಕ್ಡೌನ್ ಹೇರಿದರೆ, ಜನ ಹಸಿವಿನಿಂದ ಸಾಯ್ತಾರೆ ಎಂದು ಎಚ್ಚರಿಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು