ಆರೋಗ್ಯ ಸಚಿವರು ಕಂಡವರ ಹೆಂಡತಿಯರ ಲೆಕ್ಕ ಹಾಕುವುದರಲ್ಲಿ ಬ್ಯುಸಿಯಾಗಿದ್ದಾರೆ : ಕಾಂಗ್ರೆಸ್ ಟಾಂಗ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು : ಕಳೆದ ವರ್ಷ ಕರೋನಾ ಬಂದಾಗ ಸ್ವಿಮ್ಮಿಂಗ್ ಫೂಲ್‌ನಲ್ಲಿ ಮೋಜು ಮಾಡುತ್ತಿದ್ದರು. ಈ ಬಾರಿ ಕರೋನಾ ಉಲ್ಬಣಿಸಿದಾಗ ಸಿಡಿಗೆ ತಡೆಯಾಜ್ಞೆ ತರುವುದರಲ್ಲಿ, ಕಂಡವರ ಹೆಂಡತಿಯರ ಲೆಕ್ಕ ಹಾಕುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅವರಿಗೆ ಕಾಂಗ್ರೆಸ್ ಟಾಂಗ್ ನೀಡಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ, ಸರ್ಕಾರ ಕೊರೊನಾ ಸೋಂಕು ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ಟ್ವೀಟ್ ಮುಂದುವರಿಸಿದ ಕಾಂಗ್ರೆಸ್ ಆರೋಗ್ಯ ಸಚಿವರನ್ನು ತರಾಟೆಗೆ ತೆಗೆದುಕೊಂಡಿದೆ.

“ಆಂತರಿಕ ಕಚ್ಚಾಟ, ಸಿಡಿ ಕಳ್ಳಾಟದಲ್ಲಿ ಮುಳುಗಿದ ಬಿಜೆಪಿ ಸರ್ಕಾರ ಕರೋನಾ ನಿರ್ವಹಿಸುವುದರಲ್ಲಿ ಸೋತಿದೆ, ಕೋವಿಡ್‌ ಟೆಸ್ಟ್‌ಗಳನ್ನು ಕಡಿಮೆ ಮಾಡಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಕುಳಿತಿದ್ದರ ಪರಿಣಾಮವಿದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗೆ ಕಾಂಗ್ರೆಸ್ ತಿರುಗೇಟು ನೀಡಿದೆ.


ಸಂಪೂರ್ಣ ಟ್ರಯಲ್ ಪ್ರಕ್ರಿಯೆ ಮುಗಿಸದ ವ್ಯಾಕ್ಸಿನ್‌ಗಳ ಮಾರ್ಕೆಟಿಂಗ್ ಮಾಡುವುದರಲ್ಲಿ ಮುಳುಗಿದ್ದರ ಪರಿಣಾಮವಿದು. ಸೋಂಕಿತಸರ್ಕಾರ ಕರೋನಾ ಹೆಸರಲ್ಲಿ ಭ್ರಷ್ಟಾಚಾರ ನಡೆಸಿದ್ದರ ಪರಿಣಾಮವಿದು. ಇಂದು ರಾಜ್ಯದಲ್ಲಿ ಸೋಂಕು ದಾಖಲೆ ಮಟ್ಟಕ್ಕೇರಿದರೂ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು