200ಕೋಟಿ ರೂ. ಮಾನನಷ್ಟ ಕೊಡಬೇಕಾಗುತ್ತೆ ಬಲಪಂಥೀಯ ಪತ್ರಕರ್ತ ಅರ್ನಬ್!

arnab
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬೈ(15-10-2020): ಬಲಪಂಥೀಯ ಪರ ಪತ್ರಕರ್ತ ಅರ್ನಬ್ ಗೋಸ್ವಾಮಿ  ವಿರುದ್ಧ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತ ಹಾಗೂ ಚಿತ್ರ ನಿರ್ಮಾಪಕ ಸಂದೀಪ್ ಸಿಂಗ್ 200ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

 ಸುಶಾಂತ್​ ಸಿಂಗ್‌ ಅವರನ್ನ ಕೊಲೆ ಮಾಡಿದ್ದು ಸಂದೀಪ್ ಎಂದು ಬಿಂಬಿಸಿ ಟ್ವೀಟ್​ಗಳನ್ನ ಮಾಡುತ್ತಾ, ಅರ್ನಬ್ ಸುದ್ದಿ ಮಾಡುತ್ತಿದ್ದರು.​ಇದಲ್ಲದೆ ನನ್ನಿಂದ ಹಣ ವಸೂಲಿಗೆ ಮುಂದಾಗಿದ್ದರು. ಈ ಮೂಲಕ ನನಗೆ ಮಾನಸಿಕ ಹಿಂಸೆ ನೀಡಿದ್ದರು. ಜೊತೆಗೆ ಸುಳ್ಳು ಸುದ್ದಿ ಹಬ್ಬಿ ಟಿಆರ್ ಪಿ ಹೆಚ್ಚಿಸಿದ್ದರು ಎಂದು ಅರ್ನಬ್ ವಿರುದ್ಧ ಸಂದೀಪ್ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಅರ್ನಬ್ 200ಕೋಟಿ ರೂ. ಮಾನನಷ್ಟ ಮತ್ತು ಬೇಸರತ್ತು ಕ್ಷಮೆಯನ್ನು ಕೇಳಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆಯನ್ನು ಸಂದೀಪ್ ನೀಡಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು