ಮುಂಬೈ(12-11-2020: ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಅರ್ನಬ್ ಗೋಸ್ವಾಮಿ ನಿನ್ನೆ ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಜಾಮೀನಿನ ಮೂಲಕ ಬಿಡುಗಡೆಯಾಗಿದ್ದು, ಆ ಬಳಿಕ ತನ್ನ ರಿಪಬ್ಲಿಕ್ ಟಿವಿ ನ್ಯೂಸ್ ರೂಂಗೆ ಆಗಮಿಸಿ ಉದ್ದವ್ ಠಾಕ್ರೆ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಉದ್ಧವ್ ಠಾಕ್ರೆ ಇಲ್ಲಿ ಕೇಳಿ, ನೀವು ಎಲ್ಲಾ ಕಳೆದುಕೊಂಡಿದ್ದೀರಿ, ನೀವು ಸೋತು ಹೋಗಿದ್ದೀರಿ. ನಾನು ಜೈಲಿನಲ್ಲಿದ್ದುಕೊಂಡೇ ಸುದ್ದಿ ವಾಹಿನಿಯನ್ನು ಆರಂಭಿಸುವೆನು, ಆದರೆ ನಿಮ್ಮಿಂದ ಏನು ಮಾಡಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ನ್ಯೂಸ್ ರೂಂನಲ್ಲಿದ್ದ ಅವರ ಸಹೋದ್ಯೋಗಿಗಳು ಅವರಿಗೆ ಚಪ್ಪಾಳೆ ತಟ್ಟಿ ಬೆಂಬಲಿಸಿದ್ದಾರೆ.
#ArnabIsBack | I want to thank the Supreme Court. Jai Maharashtra!: Arnab Goswami sends a message in Marathi.
Watch him #LIVE here and share your views – https://t.co/rGQJsiKgt2 pic.twitter.com/ooqvCYmVXo
— Republic (@republic) November 11, 2020