ಅರ್ಜೆಂಟೀನಾ (26-11-2020): ಅರ್ಜೆಂಟೀನಾದ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ಸ್ಯಾನ್ ಐಸಿದ್ರೊ ಅಟಾರ್ನಿ ಜನರಲ್ ಜಾನ್ ಬ್ರೊಯಾಡ್ ಹೇಳಿದ್ದಾರೆ.
ಹೃದಯಾಘಾತದ ನಂತರ ಮರಡೋನಾ 60 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಅರ್ಜೆಂಟೀನಾದ ಫುಟ್ಬಾಲ್ ಅಸೋಸಿಯೇಷನ್ (ಎಎಫ್ಎ) ದೃಢಪಡಿಸಿದೆ.
ಮಿದುಳಿನ ಶಸ್ತ್ರಚಿಕಿತ್ಸೆಯ ನಂತರ ಹದಿನೈದು ದಿನಗಳ ಹಿಂದೆ ಮರಡೋನಾ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು, ಅವರನ್ನು ಮತ್ತೆ ರಕ್ತಹೀನತೆ ಮತ್ತು ನಿರ್ಜಲೀಕರಣದ ಆತಂಕದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದೇಶ ಮತ್ತು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುವ ಡಿಯಾಗೋ ಅರ್ಮಾಂಡೋ ಮರಡೋನಾರ ಸಾವಿನ ಬಗ್ಗೆ ತನಿಖೆಗೆ ಫೋರೆನ್ಸಿಕ್ ತಂಡ ಆಗಮಿಸಿ ತನಿಖೆ ನಡೆಸಿದೆ. ವಿಧಿವಿಜ್ಞಾನ ಮತ್ತು ಪೊಲೀಸ್ ಇಲಾಖೆಗಳ ಸಿಬ್ಬಂದಿ ಡಿಯಾಗೋ ಅರ್ಮಾಂಡೋ ಮರಡೋನಾ ಅವರ ದೇಹವನ್ನು ಪರಿಶೀಲಿಸಿದ್ದಾರೆ ಎಂದು ಮರಡೋನಾರ ಸಾವಿನ ಬಗ್ಗೆ ಹೇಳಿಕೆ ನೀಡಿ ಬ್ರೊಯಾಡ್ ಹೇಳಿದ್ದಾರೆ.