ನ್ಯೂಜಿಲ್ಯಾಂಡ್(17/10/2020); ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿ ಜೆಸಿಂತ ಅರ್ಡೆರ್ನ್ ದಾಖಲೆ ಮಟ್ಟದಲ್ಲಿ ಜಯಗಳಿಸಿದ್ದಾರೆ. “ಟುನೈಟ್, ನ್ಯೂಜಿಲ್ಯಾಂಡ್ ಕನಿಷ್ಠ 50 ವರ್ಷಗಳಲ್ಲಿ ಲೇಬರ್ ಪಾರ್ಟಿಗೆ ತನ್ನ ದೊಡ್ಡ ಬೆಂಬಲವನ್ನು ತೋರಿಸಿದೆ” ಎಂದು ಅರ್ಡೆರ್ನ್ ತಮ್ಮ ವಿಜಯದ ಭಾಷಣದಲ್ಲಿ ಹೇಳಿದ್ದಾರೆ.
ಜೆಸಿಂತ ಅರ್ಡೆರ್ನ್ ಅವರ ಸೆಂಟ್ರಲ್ ಲೆಫ್ಟ್ ಲೇಬರ್ ಪಾರ್ಟಿ 48.9 ಶೇಕಡಾ ಮತಗಳನ್ನು ಗಳಿಸಿದೆ, 1996ರಿಂದ ಪ್ರಸ್ತುತ ರಾಜಕೀಯ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ದಾಖಲೆ ಮಟ್ಟದ ಫಲಿತಾಂಶವನ್ನು ಅವರ ಪಕ್ಷವು ಗಳಿಸಿದೆ ಎನ್ನಲಾಗಿದೆ.
ಕೊರೋನಾ ನಿರ್ವಹಣೆಯಲ್ಲಿ ಜೆಸಿಂತ ಅರ್ಡೆರ್ನ್ ಅವರ ಸರಕಾರವು ವಿಶ್ವದ ಗಮನಸೆಳೆದಿತ್ತು.