ನವದೆಹಲಿ: ಎಪ್ರಿಲ್ ಒಂದರಿಂದ ಹೊಸ ಹಣಕಾಸು ವರ್ಷವು ಪ್ರಾರಂಭವಾಗಲಿದ್ದು, ಉದ್ಯೋಗಿಗಳ ವೇತನ, ಕೆಲಸದ ಅವಧಿ ಇತ್ಯಾದಿಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ.
ಸದ್ಯ ಉದ್ಯೋಗಿಗಳ ಕೆಲಸದ ಅವಧಿಯು ಒಂಭತ್ತು ಗಂಟೆಯಾಗಿದೆ. ಇದನ್ನು ಹನ್ನೆರಡು ಗಂಟೆಗಳಿಗೆ ಏರಿಸಲು ಸರಕಾರ ಚಿಂತನೆ ನಡೆಸುತ್ತಿದೆ. ಜೊತೆಗೆ ವಾರದಲ್ಲಿ ಕೆಲಸದ ದಿನಗಳ ಅವಧಿ ನಾಲ್ಕು ಗಂಟೆಗೆ ಇಳಿಕೆಯಾಗಲಿದೆಯೆಂದು ನಿರೀಕ್ಷಿಸಲಾಗಿದೆ.
ಅದೇ ವೇಳೆ ನಿರಂತರ ಐದು ಗಂಟೆಗಳಿಗಿಂತ ಹೆಚ್ಚು ಸಮಯ ಕೆಲಸದಲ್ಲೇರ್ಪಡುವುದನ್ನು ನಿಷೇಧಿಸಲಾಗಿದೆ. ಹಾಗಾಗಿ ಪ್ರತಿ ಐದು ಗಂಟೆಗಳ ಬಳಿಕ ಮೂವತ್ತು ನಿಮಿಷಗಳ ವಿಶ್ರಾಂತಿ ಸಮಯವೂ ನಿಗದಿಯಾಗಬಹುದು.
ಜೊತೆಗೆ 2020 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಮೂರು ವೇತನ ಸಂಹಿತೆಯೂ ಎಪ್ರಿಲ್ ಒಂದರಿಂದ ಜಾರಿಗೆ ಬರುವ ಸಾಧ್ಯತೆಯಿದೆ. ಇದರ ಪ್ರಕಾರ ಟೇಕ್ ಹೋಮ್ ಸಂಬಳ ಕಡಿಮೆಯಾಗುವುದು.
ಮೂಲ ವೇತನವು ಒಟ್ಟು ವೇತನದ ಶೇಕಡಾ ಐವತ್ತು ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು. ಮೂಲ ವೇತನವು ಹೆಚ್ಚಾದಂತೆ, ಸಹಜವಾಗಿ ಭವಿಷ್ಯ ನಿಧಿಯೂ ಹೆಚ್ಚಾಗುವುದು. ಇದು ನಿವೃತ್ತಿಯ ಬಳಿಕ ಪಡೆಯುವ ಮೊತ್ತವನ್ನೂ ಹೆಚ್ವಿಸುತ್ತದೆ.
ಸರಕಾರದ ಹೇಳಿಕೆಯಂತೆ, ಹೊಸ ನಿಯಮಗಳು ಉದ್ಯೋಗಿಗಳು ಮತ್ತು ಉದ್ಯೋಗದಾತರು ಇಬ್ಬರಿಗೂ ಪ್ರಯೋಜನವಾಗಲಿದೆ.