ಅಪರಾಧ ಹಿನ್ನೆಲೆಯುಳ್ಳರಿಗೆ ಪೂರ್ವಾಪರ ಯೋಚಿಸದೇ ಜಾಮೀನು ನೀಡಿರುವುದಕ್ಕೆ ಸುಪ್ರೀಮ್ ಕೋರ್ಟ್ ಆಕ್ಷೇಪ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಅಪರಾಧ ಹಿನ್ನೆಲೆಯುಳ್ಳ ಆರೋಪಿಗಳಿಗೆ ಪೂರ್ವಾಪರ ಯೋಚಿಸದೇ ಜಾಮೀನು ನೀಡಿರುವುದಕ್ಕೆ ಸುಪ್ರೀಮ್ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

ಅಪರಾಧ ಹಿನ್ನೆಲೆಯುಳ್ಳವರು ಜಾಮೀನು ಪಡೆದು ಜೈಲಿನಿಂದ ಹೊರ ಬಂದರೆ ಅದು ಸಂತ್ರಸ್ತರ ಮೇಲೆ, ಅವರ ಕುಟುಂಬದವರ ಮೇಲೆ, ಸಾಕ್ಷಿಗಳ ಮೇಲೆ ಯಾವ ಪರಿಣಾಮವನ್ನು ಉಂಟು ಮಾಡಬಹುದು ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಬೇಕೆಂದು ಅದು ಹೇಳಿದೆ. ವಿಚಾರದಲ್ಲಿ ಹೈಕೋರ್ಟ್ ತಾಳಿದ ನಿರ್ಲಕ್ಷ್ಯವನ್ನು ಅದು ಎತ್ತಿ ತೋರಿಸಿದೆ.

ಎಸ್. . ಬೋಬ್ಡೆ ನೇತೃತ್ವದ ನ್ಯಾಯ ಪೀಠವು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಹಿಂದಿನ ಅಪರಾಧದ ದಾಖಲೆಗಳನ್ನು ಪರಿಶೀಲಿಸಿ, ಬಳಿಕವೇ ಜಾಮೀನು ನೀಡಬೇಕೇ ಬೇಡವೇ ಎಂದು ತೀರ್ಮಾನಿಸಬೇಕೆಂದೂ ತಿಳಿಸಿದೆ. ನ್ಯಾಯಪೀಠದ ನೇತೃತ್ವ ವಹಿಸಿದ್ದ ಎಸ್.. ಬೋಬ್ಡೆ ಈಗಾಗಲೇ ನಿವೃತ್ತರಾಗಿದ್ದರೂ, ಸಮಿತಿಯಲ್ಲೀಗ ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಹಾಗೂ ವಿ.ರಾಮಸುಬ್ರಹ್ಮಣ್ಯನ್ ಇದ್ದಾರೆ.

ತನ್ನ ಪತಿ ರಾಜ ನಾರಾಯಣ ಸಿಂಗ್ ಅವರನ್ನು 2015 ರಲ್ಲಿ ಗುಂಡಿಕ್ಕಿ ಕೊಂದ ಆರೋಪಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು ನೀಡಿರುವುದನ್ನು ಪ್ರಶ್ನಿಸಿ, ಉತ್ತರ ಪ್ರದೇಶದ ಸುಧಾ ಸಿಂಗ್‌ ಎಂಬವರು ಸುಪ್ರೀಮ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯ ವೇಳೆಯಲ್ಲಿ ನ್ಯಾಯಪೀಠವು ರೀತಿ ಹೇಳಿದೆ. ಆರೋಪಿ ಅರುಣ್ ಯಾದವ್ ಓರ್ವ ಸುಪಾರಿ ಕೊಲೆಗಾರನಾಗಿದ್ದು, ಈತನ ವಿರುದ್ಧ ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ ಒಟ್ಟು ಹದಿನೈದಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪಕ್ಕಕ್ಕಿರಿಸಿದ ನ್ಯಾಯಪೀಠವು ವ್ಯಕ್ತಿ ಸ್ವಾತಂತ್ರ್ಯವು ಮುಖ್ಯ ಎನ್ನುವುದು ನಿಜವೇ. ಆದರೆ ಇಂತಹ ಹಿನ್ನೆಲೆಯುಳ್ಳ ಆರೋಪಿಗೆ ಜಾಮೀನು ದೊರೆತರೆ ಅದು ಸಂತ್ರಸ್ತನ ಕುಟುಂಬಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು ಮತ್ತು ಅವರು ಇನ್ನೊಮ್ಮೆ ಬಲಿಪಶುವಾಗಲು ಸಾಧ್ಯತೆಯಿದೆಯೆಂದು ಅಭಿಪ್ರಾಯ ಪಟ್ಟಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು