ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಗೆ ಎ.ಪಿ.ಉಸ್ತಾದರಿಂದ ಅಭಿನಂದನೆ

a.p usthad
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಾರಂದೂರು(08/11/2020); ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್  ಅವರಿಗೆ ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಉಸ್ತಾದ್ ಅವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಅಮೆರಿಕದ  ಭರವಸೆಯಿಂದ ಕೂಡಿದ ಭವಿಷ್ಯದ ಶುಭ ಸುದ್ದಿಗಳನ್ನು ಕೇಳಲು ನಾನು ಕಾತರನಾಗಿದ್ದೇನೆ. ಮಿಸ್ಟರ್ ಜೋ ಬಿಡನ್ ಅವರ ಮೇಲೆ ವಿಶ್ವದ ಕೋಟ್ಯಂತರ ಮಂದಿ ಭರವಸೆ ಇಟ್ಟಿದ್ದಾರೆ. ಅಮೆರಿಕ ಮತ್ತು  ಅಲ್ಲಿಯ ಜನತೆಗೆ ಶುಭವಾಗಲಿ. ಅಲ್ಲಿ ಸಹಿಷ್ಣುತೆ, ಅಂತಾರಾಷ್ಟ್ರೀಯ ಸಹಕಾರ, ಮಾನವೀಯತೆ ನೆಲೆಗೊಳ್ಳಲು ಬ್ರಿಡೆನ್ ಕಾರಣವಾಗಲಿ ಎಂದು ಅವರು ಹಾರೈಸಿದ್ದಾರೆ.

ಜಾಗತಿಕ ಶಾಂತಿ ಮತ್ತು ದ್ವಿಪಕ್ಷೀಯ ಸಂಬಂಧದ ಸುಧಾರಣೆಗೆ ಬಿಡೆನ್ ಮಹತ್ವ ನೀಡುತ್ತಾರೆಂದು ನಾನು ಆಶಿಸುತ್ತೇನೆ. ಇಸ್ಲಾಮಿಕ್ ಜಗತ್ತಿನ ಜೊತೆಗೆ ಅವರ ಸೌಹಾರ್ಧಯುತ ಸಂಬಂಧವನ್ನು ಕಾಯ್ದುಕೊಳ್ಳುತ್ತಾರೆಂದು ನಾನು ಭರವಸೆಯಿಡುತ್ತೇನೆ. ವಲಸಿಗರ ಬಗ್ಗೆ ಉತ್ತಮವಾದ ತೀರ್ಮಾನವನ್ನು ಕೈಗೊಳ್ಳುತ್ತಾರೆಂದು ಆಶಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಭಾರತೀಯ ಮುಸ್ಲಿಮರ ಪರವಾಗಿ ನಾನು ಜೋ ಬಿಡೆನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು