ಮುಸ್ಲಿಂ ನವದಂಪತಿಗಳನ್ನು ಲಾಕಪ್ ನಲ್ಲಿಟ್ಟು ಥಳಿಸಿದ ಪೊಲೀಸರು| ಯೋಗಿಯ ಕಾಯ್ದೆಯ ಎಫೆಕ್ಟ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ(11-12-2020): ಯುಪಿಯಲ್ಲಿ ಮತಾಂತರ ನಿಷೇಧ ಕಾಯ್ದೆಯು ಅಮಾಯಕರ ದೌರ್ಜನ್ಯದ ಆಯಾಮವನ್ನು ಪಡೆದುಕೊಂಡಿದೆ. ಪೊಲೀಸರು ಯಾವುದೇ ವಿಚಾರಣೆಯನ್ನು ನಡೆಸದೆ ಅಮಾಯಕ ದಂಪತಿಯನ್ನು ಲಾಕಪ್ ನಲ್ಲಿಟ್ಟು ಥಳಿಸಿರುವ ಬಗ್ಗೆ ವರದಿಯಾಗಿದೆ.

ಲಕ್ನೋ ಖುಷಿನಗರದಲ್ಲಿ ಮುಸಲ್ಮಾನ ಯುವಕ-ಯುವತಿಯ ವಿವಾಹ ಸಮಾರಂಭ ನಡೆಯುತ್ತಿತ್ತು.ಯಾರೋ ಪೊಲೀಸರಿಗೆ ಕರೆ ಮಾಡಿ ಮತಾಂತರದ ವಿವಾಹ ನಡೆಯುತ್ತಿದೆ ಎಂದು ಸುಳ್ಳು ದೂರು ನೀಡಿದ್ದಾರೆ. ತಕ್ಷಣ ಪೊಲೀಸರು ಮದುವೆ ಮನೆಗೆ ತೆರಳಿ ಯಾವುದನ್ನೂ ವಿಚಾರಿಸದೆ ವಧು-ವರರನ್ನು  ಬಂಧಿಸಿ ಲಾಕಪ್ ನಲ್ಲಿಟ್ಟು ಥಳಿಸಿದ್ದಾರೆ.

ಯುವತಿ ನಾನು ಮುಸ್ಲಿಂ ಸಮುದಾಯದವಳು, ನನ್ನನ್ನು ಮತಾಂತರ ಮಾಡಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಳು. ಆದರೆ ಪೊಲೀಸರು ಯಾವುದನ್ನು ಕೇಳಿಲ್ಲ. ಇಬ್ಬರನ್ನು ಮೇಲ್ವಿಚಾರಣೆ ಇಲ್ಲದೆ ಬಂಧಿಸಿ ಬೇಜವಾಬ್ಧಾರಿಯನ್ನು ಮೆರೆದಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು