ಉತ್ತರ ಪ್ರದೇಶ(04-12-2020): ನೂತನ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಹದಿನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಶಬಾಬ್ ಖಾನ್ ಅಕಾ ರಾಹುಲ್ (38) ಮತ್ತು ಅವರ 13 ಮಂದಿ ಪರಿಚಯಸ್ಥರ ವಿರುದ್ಧ 2020 ರ ಭಾರತೀಯ ದಂಡ ಸಂಹಿತೆ ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಅಧಿನಿಯಮಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಲ್ನಗಂಜ್ ಗ್ರಾಮದ ನಿವಾಸಿ ದೂರು ನೀಡಿದ ಹಿನ್ನೆಲೆಯಲ್ಲಿ ಮೌ ಜಿಲ್ಲೆಯ ಚಿರಾಯಕೋಟ್ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಎಎಸ್ಪಿ ತ್ರಿಭುವನ್ ನಾಥ್ ತ್ರಿಪಾಠಿ ತಿಳಿಸಿದ್ದಾರೆ.
ದೂರುದಾರರ ಪ್ರಕಾರ, ವಿವಾಹಿತ ಖಾನ್, ಧರ್ಮವನ್ನು ಬದಲಾಯಿಸುವ ಉದ್ದೇಶದಿಂದ ನವೆಂಬರ್ 30 ರಂದು ವಿವಾಹದ ಮುನ್ನಾದಿನದಂದು ನನ್ನ 27 ವರ್ಷದ ಮಗಳನ್ನು ತನ್ನ ಸಹಚರರೊಂದಿಗೆ ಸೇರಿ ಅಪಹರಿಸಿದ್ದಾನೆ ಎಂದು ದೂರು ದಾಖಲಾಗಿದೆ.