ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳ ಸಮೂಹ ಮುಸ್ಲೀಂ ವಿದ್ಯಾರ್ಥಿನಿಯ ಹಿಂದೆ ʼಜೈ ಶ್ರೀರಾಮ್ʼ ಎಂದು ಅಣಕಿಸಿದ ಹಿನ್ನೆಲೆಯಲ್ಲಿ ಬಿಬಿ ಮುಸ್ಕಾನ್ ಖಾನ್ ಎಂಬ ವಿದ್ಯಾರ್ಥಿನಿ ಒಬ್ಬಂಟಿಯಾಗಿ ಕಾಲೇಜು ಕ್ಯಾಂಪಸ್ಸಿನಲ್ಲೇ ʼಅಲ್ಲಾಹು ಅಕ್ಬರ್ʼ ಎಂದು ಘೋಷಣೆ ಕೂಗಿ ತಿರುಗೇಟು ನೀಡಿದ್ದಳು.
ಈ ದಿಟ್ಟತನಕ್ಕೆ ವ್ಯಾಪಕ ಪ್ರಶಂಸೆಗಳ ಮಹಾಪೂರ ಆಕೆಗೆ ಒದಗಿತ್ತು. ಈ ಬೆಳವಣಿಗೆಯ ಜೊತೆಗೆ ಜಮಾಅತ್ ಉಲ್ಮಾ ಐ ಹಿಂದ್ ಸಂಘಟನೆಯು ಬಿಬಿ ಮುಸ್ಕಾನ್ ಖಾನ್ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ್ದು ಈ ಕುರಿತು ತಮ್ಮ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.