ನವದೆಹಲಿ (08-12-2020): ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಇಂದು ರೈತರು ಕರೆ ನೀಡಿದ ಭಾರತ್ ಬಂದ್ಗೆ ಸಾಮಾಜಿಕ ಕಾರ್ಯಕರ್ತ ಅನ್ನಾ ಹಜಾರೆ ಬೆಂಬಲಿಸಿ ದಿನವಿಡೀ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಈ ಹಿಂದೆ ಯುಪಿಎ ಸರಕಾರಕ್ಕೆ ಅಣ್ಣಾ ಹಜಾರೆಯ ಭ್ರಷ್ಟಾಚಾರ ವಿರೋಧಿ ಹೋರಾಟವೂ ನುಂಗಲಾರದ ತುತ್ತಾಗಿತ್ತು. ಎನ್ ಡಿಎ ಅಧಿಕಾರಕ್ಕೆ ಬರಲು ಅನ್ನಾ ಹಜಾರೆಯು ಕಾರಣರಾಗಿದ್ದರು. ಆದರೆ ಮೋದಿ ಆಳ್ವಿಕೆಯಲ್ಲಿ ದೇಶದಲ್ಲಿ ಆರ್ಥಿಕತೆ, ನಿರುದ್ಯೋಗ ತಾಂಡವ ವಾಡುತ್ತಿದ್ದರೂ ಮೌನವಾಗಿದ್ದ ಅನ್ನಾ ಹಜಾರೆ ವಿರುದ್ಧ ವ್ಯಾಪಕ ಆಕ್ರೋಶ ನೆಟ್ಟಿಗರು ವ್ಯಕ್ತಪಡಿಸುತ್ತಲೇ ಬಂದಿದ್ದರು. ಇದೀಗೆ ಸುದೀರ್ಘ ವಿರಾಮದಿಂದ ಹೊರಬಂದು ಹಣ್ಣಾ ಹಜಾರೆ ರೈತರ ಪರ ಉಪವಾಸ ಆರಂಭಿಸಿದ್ದಾರೆ.
ರೈತರ ಪ್ರತಿಭಟನೆ 13 ನೇ ದಿನಕ್ಕೆ ಕಾಲಿಡುತ್ತಿದ್ದಂತೆ, ಆಂದೋಲನವು ದೇಶಾದ್ಯಂತ ಹರಡಬೇಕು. ಆಗ ಮಾತ್ರ ಸರ್ಕಾರವು ಕೃಷಿಕರ ಹಿತದೃಷ್ಟಿಯಿಂದ ಒತ್ತಡಕ್ಕೆ ಒಳಗಾಗುತ್ತದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಆಂದೋಲನವು ದೇಶಾದ್ಯಂತ ಹರಡಬೇಕೆಂದು ನಾನು ದೇಶದ ಜನರಿಗೆ ಮನವಿ ಮಾಡುತ್ತೇನೆ. ಸರ್ಕಾರದ ಮೇಲೆ ಒತ್ತಡ ಹೇರಲು ಈ ಪರಿಸ್ಥಿತಿ ಸೃಷ್ಟಿಸಬೇಕಾಗಿದೆ, ಮತ್ತು ಇದನ್ನು ಸಾಧಿಸಲು ರೈತರು ಬೀದಿಗಿಳಿಯಬೇಕು. ಆದರೆ ಯಾರೂ ಹಿಂಸಾಚಾರವನ್ನು ಮಾಡಬಾರದು ಎಂದು ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ರಾಲೆಗನ್ ಸಿದ್ಧಿ ಗ್ರಾಮದಲ್ಲಿ ಉಪವಾಸವನ್ನು ಪ್ರಾರಂಭಿಸಿದ ಹಜಾರೆ ಹೇಳಿದ್ದಾರೆ.
.