ಬಿಪಿಎಲ್ ಕಾರ್ಡುದಾರರಿಗೆ ಶಾಕಿಂಗ್: ಅನ್ನಭಾಗ್ಯದ “ಉಚಿತ” ಅಕ್ಕಿ ಮೇಲೆ ಸರಕಾರದ ಕಣ್ಣು!

anna bagya
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(19-01-2021): ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಸಿಗುತ್ತಿರುವ ಉಚಿತ ಅಕ್ಕಿಗೆ ದರ ನಿಗದಿ ಪಡಿಸಲು ರಾಜ್ಯ ಸರಕಾರ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಇಲಾಖಾ ಮಟ್ಟದಲ್ಲೂ ಚರ್ಚೆ ನಡೆದಿದ್ದು ಅಂತಿಮ ನಿರ್ಧಾರವಷ್ಟೇ ಪ್ರಕಟವಾಗಲು ಬಾಕಿ ಉಳಿದಿದೆ.

ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿಗೆ ಪ್ರತಿ ತಿಂಗಳು 120 ಕೋಟಿ ರೂ. ವೆಚ್ಚವಾಗುತ್ತಿದೆ.  ಇದರಿಂದಾಗಿ ಅಕ್ಕಿಗೆ ಕನಿಷ್ಟ ದರವನ್ನು ವಿಧಿಸಿ ಜನರಿಂದ ಹಣವನ್ನು ಸಂಗ್ರಹಿಸಲು ಸರಕಾರ ಮುಂದಾಗಿದೆ. ಸಂಗ್ರಹಿತ ಹಣವನ್ನು ವಾಪಸ್ ಫಲಾನುಭವಿಗಳಿಗೆ ಬೇರೆ ರೂಪದಲ್ಲಿ ವಿತರಿಸಲಾಗುತ್ತಿದೆ ಎನ್ನಲಾಗಿದೆ.

ಸದ್ಯ ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ರಾಜ್ಯದಲ್ಲಿ 1.22 ಕೋಟಿ ಕುಟುಂಬದ 4.27 ಕೋಟಿ ಜನ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇನ್ನು ಮುಂದಕ್ಕೆ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಿ ಇತರ ಅಗತ್ಯ ವಸ್ತುಗಳು ನೀಡಬೇಕು ಎನ್ನುವ ಪ್ರಸ್ತಾಪ ಕೂಡ ಸರಕಾರದ ಮುಂದೆ ಇದೆ. ಈ ಬಗೆಗಿನ ಅಂತಿಮ ನಿರ್ಧಾರವನ್ನು ಸಿಎಂ ಯಡಿಯೂರಪ್ಪ ಅವರು ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು