ಶತ್ರುವಿಗೂ ನ್ಯಾಯ ನಿರಾಕರಣೆ ಮಾಡಬಾರದು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಗಾಂಧಿಯ ಆತ್ಮ ಸಾಕ್ಷಿ ಮತ್ತು ನ್ಯಾಯ ಪಂಚಾಯಿತಿ ಸ್ಥಾಪನೆಯಾದರೆ ಅಪರಾಧಿಗಳು ಸಿಗಬಹುದು ಕಾರಣ ಆತ್ಮಸಾಕ್ಷಿಯುಳ್ಳವರಿಗೆ ಮಾತ್ರ ಭಾರತವನ್ನು ರಕ್ಷಿಸಬಹುದು.

 500 ವರ್ಷಗಳ ಇತಿಹಾಸ ವಿರುವ ಮಸೀದಿ ಕಟ್ಟಡ 1992 ಡಿಸೆಂಬರ್ 06 ರಂದು ದ್ವಂಸ ವಾಗುತ್ತದೆ.ಸಾವಿರಾರು ಕಾವಿದಾರಿಗಳು ಹೊಡೆದು ಉರುಳಿಸಿದ ನೇರಾನೇರಾ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು.ಈ ಘಟನೆಯ ನಂತರ ನಾಲ್ಕು ರಾಜ್ಯಗಳ ಬಿಜೆಪಿ ಸರಕಾರವನ್ನು ವಜಾ ಗೊಳಿಸಲಾಗಿತ್ತು .ಸುಪ್ರೀಂ ಕೋರ್ಟ್ ಈ ಘಟನೆಯ ಬಗ್ಗೆ ಮಹಾ ಅಪರಾಧವೆಂದು ಬಣ್ಣಿಸಿತ್ತು. ಅಂದಿನ ಸರಕಾರ ಲೋಕಸಭೆಯಲ್ಲಿ ಶ್ವೇತ ಪತ್ರ ಮಂಡನೆ ಮಾಡಿ ರಾಷ್ಟ್ರೀಯ ದುರಂತವೆಂದು ಘಟನೆಯನ್ನು ಖಂಡಿಸಿತ್ತು.ಕಳೆದ ಸಲ ಬಾಬರಿ ಭೂಮಿ ತೀರ್ಪಿನಲ್ಲೂ ಮಸೀದಿ ಕಟ್ಟಡ ದ್ವಂಸ ಕ್ರಿಮಿನಲ್ ಅಪರಾಧ ಎಂದು ವ್ಯಾಖ್ಯಾನ ಹೇಳಿತ್ತು.ಆ ನಂತರ ನಡೆದ ಗಲಭೆಗಳಲ್ಲಿ ಸುಮಾರು ಮೂರು ಸಾವಿರ ಜೀವ ಹಾನಿಯೂ ನಡೆದಿದೆ.

ಕಟ್ಟಡ ದ್ವಂಸಗೊಂಡು

ಇಪ್ಪತ್ತ ಎಂಟು ವರ್ಷಗಳು ಕಳೆದು ಎರಡು ಸಾವಿರದ ಮುನ್ನೂರು ಪೇಜುಗಳ  ತನಿಖಾ ವರದಿ ಸುಪ್ರೀಂ ಕೋರ್ಟ್ ಪ್ರಕಟಿಸಿದಾಗ ಅಪರಾಧಿಗಳೇ ಮಾಯವಾಗಿದ್ದರು.ಯಾರೂ ಅಪರಾಧಿಗಳು ಸಿಕ್ಕಿರಲಿಲ್ಲ.

 ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟ ಕೋಟ್ಯಂತರ ಮಂದಿ ಆತಂಕದಿಂದ ಹೇಳಿದ್ದು  ಹಗಲಿನಲ್ಲಿ ಇಡೀ ಜಗತ್ತು ನೋಡುವಂತೆ ದ್ವಂಸಗೊಂಡ ಮಸೀದಿಯ ಅಪರಾಧಿಗಳು ಸಿಗದಿರುವಾಗ ಮುಂದೆ ನ್ಯಾಯದ ಮೇಲೆ ರವಸೆ ಇಡಬಹುದೇ ಎಂದಾಗಿದೆ.

ಇಂದಿನ ಪರಿಸ್ಥಿತಿ ತುಂಬಾ  ಹದಗೆಟ್ಟಿದೆ.ಮೊನ್ನೆ ಯುಪಿಯಲ್ಲಿ ನಡೆದ ಮನೀಷಾ ವಾಲ್ಮೀಕಿ ಎಂಬ ಹೆಣ್ಣು ಮಗಳ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಅಮಾನುಷವಾಗಿತ್ತು. ಅದೂ ಅಲ್ಲದೇ ಕಾನೂನು ಪಾಲಕರು ರಾತ್ರೋರಾತ್ರಿ ಹೆಣವನ್ನು ಸುಟ್ಟು ಅಪರಾಧಿಗಳನ್ನು ರಕ್ಷಿಸಲು ಬೇಕಾದ ತಯಾರಿಯೂ ನಡೆಸಿ ಮುಗಿಸಿದರು.ಇಡೀ ದೇಶ ಆ ಮಹಾ ಅಪರಾಧ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದರೆ,ಮಾಧ್ಯಮಗಳು ಡ್ರಗ್ಸ್ ಕೇಸಲ್ಲಿ ಸಿಕ್ಕಿಹಾಕಿಕೊಂಡ ಒಬ್ಬಳಿಗೆ ಕಣ್ಣೀರು ಹಾಕುತ್ತಿತ್ತು.ಕಾರ್ಯಾಂಗ ನ್ಯಾಯಾಂಗ ಶಾಸಕಾಂಗ ಮಾಧ್ಯಮ ಎಲ್ಲವು ಕೂಡ ನ್ಯಾಯ ಪಾಲನೆಗೆ ಬೇಕಾದ ರೀತಿಯಲ್ಲಿ ವರ್ತಿಸಿದರೆ ಮಾತ್ರ ಈ ದೇಶವನ್ನು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಸಬಹುದು.ಹಾಗೇ ಸಾರ್ವಭೌಮ ರಾಷ್ಟ್ರವಾಗಿಯೂ ಕಾಪಾಡಬಹುದು.

ನ್ಯಾಯವನ್ನು ಶತ್ರುವಿಗೂ ನಿರಾಕರಣೆ ಮಾಡಬಾರದು ಎಂದು ಕುರಾನ್ ಹೇಳುತ್ತದೆ.

ಭಾರತದ ಸಂಸ್ಕ್ರತಿ ಸತ್ಯವಾದ ಧರ್ಮವಾಗಿದೆ.

ಧರ್ಮದ ಬಗೆಗೆ ಇರುವ ಪ್ರಸಿದ್ಧ ಸುಭಾಷಿತ

ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ |

ನ ಬ್ರೂಯಾತ್ ಸತ್ಯಮಪ್ರಿಯಂ ||

ಪ್ರಿಯಂಚ ನಾನೃತಂ ಬ್ರೂಯಾತ್ |

ಏಷ ಧರ್ಮಃ ಸನಾತನಃ ||

ಸತ್ಯವನ್ನು ಹೇಳಬೇಕು , ಪ್ರಿಯವಾದುದನ್ನು (ಹಿತವಾದುದನ್ನು )ಹೇಳ ಬೇಕು ;

ಅಪ್ರಿಯವಾದ (ನೋವುಂಟುಮಾಡುವ) ಸತ್ಯವನ್ನು ಹೇಳಬಾರದು ;ಪ್ರಿಯವಾದುದೆಂದು ಅಸತ್ಯವನ್ನು ಹೇಳಬಾರದು; ಇದು ಸನಾತನ ಎಂದರೆ ಶಾಶ್ವತವಾದ ಧರ್ಮ.

  ಭಾರತದಲ್ಲಿ ನ್ಯಾಯ ಪಂಚಾಯತಿಯನ್ನು ಬಲಪಡಿಸುವ ಮತ್ತು ಜಾರಿಗೊಳಿಸುವ ರಾಷ್ಟ್ರೀಯ ಆರಂಭಿಕ ಉಪಕ್ರಮ ಸಮಾವೇಶದಲ್ಲಿ ಪ್ರಧಾನ ಮಂತ್ರಿ ಅವರು ಮಾಡಿದ ಸಮಾರೋಪ ಭಾಷಣದಲ್ಲಿ *(2016) ಹೇಳಿದ ಮಾತು ಮತ್ತು ಈಗ ನಡೆಯುತ್ತಿರುವ ವಿದ್ಯಮಾನ ಏನು ಎಂಬುದನ್ನು ಅರಿಯಬಹುದು.

 ಗಾಂಧೀಜಿಯು ನ್ಯಾಯ ಪಾಲನೆಯ ಬಗ್ಗೆ ಹೀಗೆ ಹೇಳಿದ್ದರು;

 “ನ್ಯಾಯ ಪಂಚಾಯತಿಯ ಬಗ್ಗೆ ಬಹುಷಃ ಮಹಾತ್ಮಾಗಾಂಧೀಜಿಯವರದ್ದು ಸರಳ ವ್ಯಾಖ್ಯಾನವೊಂದಿದೆ. ಅವರು ಹೇಳಿದ್ದು: ನಾನು ಕಾನೂನಿನ ನಿಜವಾದ ನ್ಯಾಯಾಚರಣೆಯ ನಡವಳಿಯನ್ನು ಅಭ್ಯಾಸ ಮಾಡಿದ್ದವನು. ನಾನು ಮನುಷ್ಯನ ಸ್ವಭಾವದ ಉತ್ತಮ ಅಂಶವನ್ನು ಹುಡುಕಲು ಅಭ್ಯಾಸ ಮಾಡಿದೆ ಮತ್ತು ಮನುಷ್ಯನ ಹೃದಯದೊಳಗೆ ಪ್ರವೇಶಿಸಲು ಕಲಿತೆ. ವಕೀಲನ ನಿಜವಾದ ಕೆಲಸ ಎಂದರೆ ವಿವಾದದಲ್ಲಿ ಭಾಗಿಯಾಗಿರುವ ಎರಡೂ ಕಡೆಯವರನ್ನು ಒಟ್ಟು ಸೇರಿಸುವುದು ಎಂಬುದನ್ನು ಅರಿತುಕೊಂಡೆ. ಆ ಪಾಠ ನನ್ನೊಳಗೆ ಅಳಿಸಲಾಗದಂತಹ ಭಾವವನ್ನು ಮೂಡಿಸಿತು.  ನನ್ನ ಇಪ್ಪತ್ತಮೂರು ವರ್ಷಗಳ ವಕೀಲಿಕೆ ವೃತ್ತಿಯಲ್ಲಿ ನಾನು ನನ್ನ ಸಮಯದ ಬಹುಭಾಗವನ್ನು ನೂರಾರು ಪ್ರಕರಣಗಳಲ್ಲಿ ಖಾಸಗಿಯಾಗಿ ರಾಜಿ ಪಂಚಾಯತಿ ಮಾಡುವುದಕ್ಕೆ ವಿನಿಯೋಗಿಸಿದೆ.  ಅದರಿಂದ ನಾನು ಕಳೆದುಕೊಂಡದ್ದೇನೂ ಇಲ್ಲ. ಹಣವೂ ನಷ್ಟವಾಗಲಿಲ್ಲ ಮತ್ತು ಖಚಿತವಾಗಿ ನನ್ನ ಆತ್ಮಸಾಕ್ಷಿಗೂ ತೊಂದರೆಯಾಗಲಿಲ್ಲ.

 ಇಂತಹಾ ಗಾಂಧಿಯ ಆತ್ಮಸಾಕ್ಷಿಯುಳ್ಳವರಿಗೆ ಮಾತ್ರ ಭಾರತವನ್ನು ರಕ್ಷಿಸಬಹುದು. ಗಾಂಧಿಯ ಮಾತನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಮುಂದುವರೆಸಿ ಹೀಗೆನ್ನುತ್ತಾರೆ..

  “ಸ್ನೇಹಿತರೇ,    ಒಂದು ಸಮರ್ಥವಾದ, ಪರ್ಯಾಯವಾದ, ವಿವಾದ ಪರಿಹಾರ ಪರಿಸರ ವ್ಯವಸ್ಥೆ ಭಾರತದ ರಾಷ್ಟ್ರೀಯ ಆದ್ಯತೆ. ನಾವು ಭಾರತವನ್ನು ಜಾಗತಿಕವಾಗಿ ನ್ಯಾಯ ಪಂಚಾಯತಿ ವ್ಯವಯ ಪಂಚಾಯತಿಯ ಬಗ್ಗೆ ಬಹುಷಃ ಮಹಾತ್ಮಾಗಾಂಧೀಜಿಯವರದ್ದು ಸರಳ ವ್ಯಾಖ್ಯಾನವೊಂದಿದೆ. ಅವರು ಹೇಳಿದ್ದು: ’ನಾನು ಕಾನೂನಿನ ನಿಜವಾದ ನ್ಯಾಯಾಚರಣೆಯ ನಡವಳಿಯನ್ನು ಅಭ್ಯಾಸ ಮಾಡಿದ್ದವನು. ನಾನು ಮನುಷ್ಯನ ಸ್ವಭಾವದ ಉತ್ತಮ ಅಂಶವನ್ನು ಹುಡುಕಲು ಅಭ್ಯಾಸ ಮಾಡಿದೆ ಮತ್ತು ಮನುಷ್ಯನ ಹೃದಯದೊಳಗೆ ಪ್ರವೇಶಿಸಲು ಕಲಿತೆಸ್ಥೆಯ ತಾಣವಾಗಿ ರೂಪಿಸಬೇಕಾಗಿದೆ.ರೋಶೋ ಪೌಂಡ್ ನ ಪ್ರಖ್ಯಾತ ಹೇಳಿಕೆಯಂತೆ ಕಾನೂನು ಸ್ಥಿರವಾಗಿರಬೇಕು, ಆದರೆ ಅದು ಚಲನೆ ಕಳೆದುಕೊಳ್ಳಬಾರದು’, (ಸ್ಥಗಿತವಾಗಿರಬಾರದು /ನಿಂತ ನೀರಾಗಿರಬಾರದು). ನಾವು ನಮ್ಮ ತೀರಗಳಿಗೆ ಹೊರಭಾಗಗಳಿಂದ ಸ್ಪೂರ್ತಿ ಪಡೆದುಕೊಳ್ಳಬೇಕು. ಈ ಸಮ್ಮೇಳನ ಈ ವಿಷಯಕ್ಕೆ ಸಂಬಂಧಿಸಿದ ನಿರ್ಣಾಯಕ ನಿಯಂತ್ರಕ ವ್ಯವಸ್ಥೆ, ನೀತಿ ಮತ್ತು ಮನೋಸ್ಥಿತಿಯ ಸುಧಾರಣೆಗಳ ಕುರಿತು ಸಂವಾದಕ್ಕೆ ಒಂದು ಉತ್ತಮ /ಆದರ್ಶ ವೇದಿಕೆಯನ್ನು ಒದಗಿಸಿದೆ.ಇದು ದೇಶದ ಪ್ರಧಾನಿಯ ರವಸೆಯ ಮಾತು” ಆದರೆ ಈ ಮಾತು ಎಷ್ಟು ಸತ್ಯವೆಂದು ಜನ ಚಿಂತಾಕ್ರಾಂತರಾಗಿದ್ದರೆ.

ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು