ಬುಡಕಟ್ಟು ಪ್ರದೇಶದ ರಿಯಲ್ ಹೀರೋಯಿನ್: ಪ್ರತಿದಿನ 18 ಕಿ.ಮೀ ತೆರಳಿ ತಾಯಿ-ಶಿಶುಗಳ ಹಾರೈಕೆ ಮಾಡುವ ಮಹಾತಾಯಿ!

anganawadi worker
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಹಾರಾಷ್ಟ್ರ(24-11-2020): ಕೋವಿಡ್ ಸಾಂಕ್ರಾಮಿಕವು ಪ್ರತಿಯೊಬ್ಬರ ಮೇಲೂ ಪ್ರಭಾವ ಬೀರಿದೆ. ಕೆಲವು ಜನರು ಈ ವೇಳೆ ಜನರಿಗೆ ಸಹಾಯ ಮಾಡಿ ಹೀರೋಗಳಾಗಿ ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಂತಹ ಒಂದು ನಿದರ್ಶನದಲ್ಲಿ, ಮಹಾರಾಷ್ಟ್ರದ ನಂದುರ್ಬಾರ್‌ನ ಅಂಗನವಾಡಿ ಕೆಲಸಗಾರ್ತಿ ರೇಲು ವಾಸವೆ ಅವರು ಕೂಡ ಒಬ್ಬರು. ಕೆಲಸದ ಬಗೆಗಿನ ಅವರ ನೀಯತ್ತಿನ ಕಥೆ ವೈರಲ್ ಆದ ನಂತರ ಅವರನ್ನು ರಿಯಲ್ ಹೀರೋ ಎಂದು ಪ್ರಶಂಸಿಸಲಾಗುತ್ತಿದೆ.

ರೇಲು ವಾಸವೆ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬುಡಕಟ್ಟು ಮಕ್ಕಳಿಗೆ ಮತ್ತು ತಾಯಂದಿರಿಗೆ ಸಹಾಯ ಮಾಡಲು ಪ್ರತಿದಿನ 18 ಕಿಲೋಮೀಟರ್ ಒಳಗಿನ ಹಳ್ಳಿಗಳಿಗೆ ಹೋಗುತ್ತಾಳೆ. ವಿಶೇಷವೆಂದರೆ, ರೇಲು ನಾಸಿಕ್‌ಗೆ ಸೇರಿದವಳು ಮತ್ತು ನರ್ಮದಾ ಬಳಿ ಬೆಳೆದವರು. ಅಲ್ಲಿ ಅವರು ಈಜು ಕಲಿತಿದ್ದರು. ಏಪ್ರಿಲ್‌ನಿಂದ, ಅವರು ನವಜಾತ ಬುಡಕಟ್ಟು ಶಿಶುಗಳನ್ನು ಮತ್ತು ತಾಯಂದಿರನ್ನು ಭೇಟಿ ಮಾಡಿ ಹಾರೈಕೆ ಮಾಡುತ್ತಿದ್ದಾರೆ.

ಅಂಗನವಾಡಿ ಸದಸ್ಯೆಯಾಗಿ, ನವಜಾತ ಶಿಶುಗಳು ಮತ್ತು ಅವರ ತಾಯಂದಿರ ತೂಕ, ಆರೋಗ್ಯ ಮತ್ತು ಸರಿಯಾದ ಬೆಳವಣಿಗೆಯನ್ನು ಅವರು ಪರಿಶೀಲಿಸುತ್ತಾರೆ.

ಪ್ರತಿದಿನ 18ಕಿ.ಮೀ ದೋಣಿಯಲ್ಲಿ ತಲುಪುವುದು ಸುಲಭವಲ್ಲ. ನಾನು ಸಂಜೆ ಮನೆಗೆ ಹಿಂದಿರುಗುವ ಹೊತ್ತಿಗೆ ನನ್ನ ಕೈ ನೋಯುತ್ತದೆ. ಆದರೆ ಅದರ ಬಗ್ಗೆ ನನಗೆ ಚಿಂತೆ ಇಲ್ಲ. ಶಿಶುಗಳು ಮತ್ತು ತಾಯಂದಿರು ಪೌಷ್ಠಿಕ ಆಹಾರವನ್ನು ಸೇವಿಸಿ ಆರೋಗ್ಯವಾಗಿರುವುದು ಬಹಳ ಮುಖ್ಯ. COVID-19 ಸುಧಾರಿಸುವವರೆಗೆ ನಾನು ಈ ಕುಗ್ರಾಮಗಳಿಗೆ ಭೇಟಿ ನೀಡುತ್ತೇನೆ ಎಂದು ರೇಲು ಹೇಳಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲಿ ರೇಲು ಸಹಾಯವನ್ನು ಬುಡಕಟ್ಟು ಜನರು ಬಹಳವಾಗಿ ಮೆಚ್ಚಿದ್ದಾರೆ ಮತ್ತು ಈಗ ಅವರ ಕೆಲಸವು ಮುಖ್ಯಮಂತ್ರಿಗಳ ಕಚೇರಿ ಮತ್ತು ನಂದುರ್ಬಾರ್ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕರನ್ನೂ ತಲುಪಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು