ವಿಜಯವಾಡ(07-12-2020): ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ಪಟ್ಟಣದಲ್ಲಿ ಕಾಣಿಸಿಕೊಂಡ ನಿಗೂಢ ರೋಗಕ್ಕೆ ಓರ್ವ ಬಲಿಯಾಗಿದ್ದು, ಆತಂಕ ಮನೆಮಾಡಿದೆ.
45 ವರ್ಷದ ವ್ಯಕ್ತಿಯೋರ್ವ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 7 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಆಂಧ್ರದ ಎಲುರಿನ ಉತ್ತರ ಬೀದಿ, ದಕ್ಷಿಣ ಬೀದಿ, ಅರುಂಧತಿಪೇಟೆ ಮತ್ತು ಅಶೋಕ ನಗರ ಸುತ್ತಮುತ್ತಲ ನಗರದ 290ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದವರಲ್ಲಿ ತಲೆ ನೋವು, ವಾಂತಿ, ತಲೆ ತಿರುಗುವಿಕೆ ಮತ್ತು ಮೂರ್ಛೆರೋಗ ಕಾಣಿಸಿಕೊಂಡಿದೆ.
ನಿಗೂಢವಾದ ರೋಗಕ್ಕೆ ಕಾರಣ ಮತ್ತು ರೋಗದ ಬಗ್ಗೆ ಪತ್ತೆಮಾಡುವುದು ವೈದ್ಯರಿಗೆ ಸವಾಲಾಗಿದೆ. ರಕ್ತದ ಮಾದರಿ ಮತ್ತು ನೀರನ್ನು ಪರೀಕ್ಷೆ ಮಾಡಲಾಗುತ್ತಿದೆ. ವಿಜಯವಾಡದ ಆಸ್ಪತ್ರೆಯಲ್ಲಿ ರೋಗಿಗಳ ಮೇಲೆ ಹೆಚ್ಚಿನ ನಿಗಾವಹಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.