ಅಹಮಾದಾಬಾದ್ (30-11-2020): ಗುಜರಾತಿನ ಖ್ಯಾತ ಗಾಯಕಿ ಅಮಿತಾ ತಾನು ಲಿಂಗ ಪರಿವರ್ತನೆ ಮಾಡಿಕೊಂಡಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಗುಜರಾತಿನ ಅಮರೇಲಿ ಜಿಲ್ಲೆಯ ಮೋಟಾ ಮುಂಜಿಯಾಸಾರ್ ಗ್ರಾಮದ ಅಮಿತಾ ಈಗ ಆದಿತ್ಯರಾಗಿದ್ದಾರೆ. ನಾನೀಗ ಸ್ತ್ರೀ ಅಲ್ಲ, ಬದಲಿಗೆ ಪುರುಷ. ಕಾಲೇಜಿನ ದಿನಗಳವರೆಗೂ ನಾನು ಹೆಣ್ಣಾಗಿದ್ದೆ ಈಗ ಲಿಂಗ ಪರಿವರ್ತನೆ ಮಾಡಿಕೊಂಡು ಗಂಡಾಗಿದ್ದೇನೆ ಎಂದು ಅಮಿತಾ ತನ್ನ ಅಭಿಮಾನಿಗಳಿಗೆ ಹೇಳಿದ್ದಾರೆ.
ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದ ಅಮಿತಾ ತಮ್ಮ ಭಜನೆ ಹಾಡುಗಳಿಂದ ಗುರುತಿಸಿಕೊಂಡಿದ್ದರು. ಇವರ ದೇಹವೂ ಹೆಣ್ಣಿನಂತೆಯೇ ಇತ್ತು. ಆದರೆ ಯವ್ವನಕ್ಕೆ ಬಂದಾಗ ಮನಸ್ಸಿನಲ್ಲಾದ ಬದಲಾವಣೆಯಿಂದ ಗಂಡಾಗಿ ಮಾರ್ಪಡು ಮಾಡಿಕೊಂಡಿರುವುದಾಗಿ ಅಮಿತಾ ಹೇಳಿದ್ದಾರೆ. ಅಮಿತಾಗೆ ಪೋಷಕರು ಬೆಂಬಲವನ್ನು ನೀಡಿದ್ದರು.
ಸಮಾಜ ನಮ್ಮನ್ನು ತಾರತಮ್ಯದಿಂದ ನೋಡುತ್ತದೆ. ಟೀಕಿಸುತ್ತದೆ. ನಮ್ಮನ್ನು ಕೂಡ ಎಲ್ಲರಂತೆಯೇ ಕಾಣಬೇಕು ಎಂದು ಅಮಿತಾ ಕೇಳಿಕೊಂಡಿದ್ದಾಳೆ.