ಕೊರೋನಾ ನಿಯಂತ್ರಣಕ್ಕೆ ಬಂದ ತಕ್ಷಣವೇ ಸಿಎಎ ಜಾರಿ: ಅಮಿತ್ ಷಾ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊಲ್ಕತ್ತಾ(6-11-2020): ಕೊರೋನಾ ಸಾಂಕ್ರಾಮಿಕ ರೋಗವು ನಿಯಂತ್ರಣಕ್ಕೆ ಬಂದ ತಕ್ಷಣವೇ ಸಿಎಎ ಜಾರಿ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.

ಪೌರತ್ವ ಕಾಯ್ದೆಯು ಜಾರಿ ಮಾಡಲಾಗುವುದು. ಎಲ್ಲಾ ನಿರಾಶ್ರಿತರಿಗೂ ಪೌರತ್ವ ಸಿಗಲಿದೆ. ಕೊರೋನಾ ಕಾರಣದಿಂದಾಗಿ ಇದು ಜಾರಿಯಾಗಲು ತಡವಾಗಿತ್ತು. ಸಿಎಎ ಎನ್ನುವುದು ನೆರೆಯ ದೇಶಗಳಲ್ಲಿ ಮತೀಯ ಶೋಷಣೆಗೊಳಗಾದವರಿಗಾಗಿ ಮಾಡಲಾಗಿದ್ದು, ಆದರೆ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಮತ್ತು ಬಿಎಸ್ಪಿಗಳು ಅದನ್ನು ಅಲ್ಪಸಂಖ್ಯಾತರಿಗೆ ವಿರುದ್ಧವಾಗಿ ಮಾಡಲಾದ ಕಾಯ್ದೆ ಎಂಬ ಕಾರಣ ನೀಡಿ ವಿರೋಧಿಸುತ್ತಿದೆ. ಪ್ರತಿಪಕ್ಷಗಳು ಈ ವಿಷಯದಲ್ಲಿ ಅಪಪ್ರಚಾರ ಮಾಡುತ್ತಿವೆ. ಸಿಎಎ ಎಲ್ಲರಿಗೂ ಪೌರತ್ವ ನೀಡುವ ಕಾಯ್ದೆಯಾಗಿದೆ ಎಂದು ಅಮಿತ್ ಷಾ ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಇಲ್ಲಿನ ಜನ ಬದಲಾವಣೆ ಬಯಸುತ್ತಿದ್ದಾರೆ ಎಂದೂ ಅವರು ಹೇಳಿದರು. ಡಿಸೆಂಬರ್ ತಿಂಗಳಲ್ಲಿ ಪಾರ್ಲಿಮೆಂಟಿನ ಒಪ್ಪಿಗೆ ಗಳಿಸಿಕೊಂಡ ಸಿಎಎ ದೇಶಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಕೊರೋನಾ ಲಾಕ್‌ಡೌನ್ ಬಳಿಕ ಕಾಯ್ದೆಯ ಜಾರಿಯೂ, ಅದರ ವಿರುದ್ಧದ ಪ್ರತಿಭಟನೆಯೂ ನಿಂತು ಹೋಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು