ಅಮೇರಿಕನ್ ಟೆಕ್ ದೈತ್ಯ ಗೂಗಲಿಗೆ ಫ್ರಾನ್ಸಿನಿಂದ ಬೃಹತ್ ಮೊತ್ತದ ದಂಡ | ಆನ್ಲೈನ್ ಜಾಹೀರಾತಿನಲ್ಲಿ ಗೂಗಲ್ ಪ್ರಾಬಲ್ಯ ಹೊಂದಿದ ಹಿನ್ನೆಲೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಪ್ಯಾರಿಸ್: ಅಮೇರಿಕಾ ಮೂಲದ ಟೆಕ್ ದೈತ್ಯ ಗೂಗಲ್ ಗೆ ಫ್ರಾನ್ಸ್ ನಲ್ಲಿ ದೊಡ್ಡ ಮೊತ್ತದ ದಂಡ ವಿಧಿಸಲಾಗಿದೆ. ಆನ್ಲೈನ್ ಜಾಹೀರಾತಿನಲ್ಲಿ ಗೂಗಲ್ ಪ್ರಾಬಲ್ಯ ಹೊಂದಿದ ಹಿನ್ನೆಲೆಯಲ್ಲಿ ಫ್ರಾನ್ಸ್ ಕ್ರಮಕ್ಕೆ ಮುಂದಾಗಿದೆ.

ಈಗಾಗಲೇ ಯುರೋಪಿನಲ್ಲಿ ಅಮೇರಿಕಾದ ಟೆಕ್ ಪ್ರಾಬಲ್ಯದ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿದೆ. ಇದೀಗ ದೊಡ್ಡ ಮೊತ್ತದ ದಂಡ ವಿಧಿಸುವ ಮೂಲಕ ಅಮೇರಿಕನ್ ಪ್ರಾಬಲ್ಯಕ್ಕೆ ಕಠಿಣ ಸಂದೇಶ ರವಾನಿಸಿದಂತಾಗಿದೆ.

ಆನ್‌ಲೈನ್ ಜಾಹೀರಾತು ಮಾರಾಟದಲ್ಲಿ ಗೂಗಲ್ ಏಕಸ್ವಾಮ್ಯವನ್ನು ಹೊಂದಿದೆ ಎಂದು ನ್ಯೂಸ್ ಕಾರ್ಪ್, ಫ್ರೆಂಚ್ ಡೈಲಿಲೆ ಫಿಗರೊ ಮತ್ತು ಬೆಲ್ಜಿಯಂನ ಗ್ರೂಪ್ ರೊಸೆಲ್ ಎಂಬ ಮೂರು ಮಾಧ್ಯಮ ಗುಂಪುಗಳು ಒಮ್ಮತದ ಅಭಿಪ್ರಾಯ ತಾಳಿದೆ. ಇದನ್ನು ಆಧಾರವಾಗಿಟ್ಟು ಫ್ರಾನ್ಸ್‌ನ ಸ್ಪರ್ಧಾ ನಿಯಂತ್ರಕವು ಗೂಗಲ್‌ಗೆ 220 ಮಿಲಿಯನ್ ಯೂರೊ ದಂಡ ವಿಧಿಸಿದೆ. ಇದು ಭಾರತದ ಸರಿ ಸುಮಾರು 1950 ಕೋಟಿ ರೂಪಾಯಿಗಳಷ್ಟಾಗುತ್ತದೆ.

ಮಾಧ್ಯಮ ಸಂಸ್ಥೆಗಳು ತಮ್ಮ ವೆಬ್ಸೈಟ್ ಮತ್ತು ಮೊಬೈಲ್ ಆ್ಯಪುಗಳಲ್ಲಿರುವ ಜಾಹೀರಾತು ಸ್ಥಳವನ್ನು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಮಾರುತ್ತಿದ್ದವು. ಸಮಯದಲ್ಲಿ ಅಸಮಂಜಸವಾಗಿ ಮತ್ತು ವೈವಿಧ್ಯಮಯ ರೂಪಗಳಲ್ಲಿ ಗೂಗಲ್ ಸಂಸ್ಥೆಯು ಸ್ಪರ್ಧಿಸುತ್ತಿರುವುದು ಕಂಡು ಬಂದಿದೆ.

ಗೂಗಲಿಗೆ ಫ್ರಾನ್ಸಿನಲ್ಲಿ ಮೊದಲೂ ದಂಡ ವಿಧಿಸಲಾಗಿತ್ತು. 2019 ರಲ್ಲಿ ತನ್ನ ಅಪಾರದರ್ಶಕ ರೀತಿಯ ಜಾಹೀರಾತು ನಿರ್ವಹಣೆಗಾಗಿ 150 ಮಿಲಿಯನ್ ಯುರೋ ದಂಡ ವಿಧಿಸಲಾಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು