ವಾಷಿಂಗ್ಟನ್(22/10/2020): ಮುಂದಿನ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಅವರ ಪರ ಮತ ಚಲಾಯಿಸಿ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುವಂತೆ ಅಮೆರಿಕ ಜನತೆಯೊಂದಿಗೆ ಮಾಜಿ ಅಧ್ಯಕ್ಷ ಒಬಾಮ ಮನವಿ ಮಾಡಿದ್ದಾರೆ.
ಒಬಾಮಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬೈಡನ್ ಉಪಾಧ್ಯಕ್ಷರಾಗಿದ್ದರು. ನವೆಂಬರ್ 3ರಂದು ಜನರು ಕೊರೋನಾ ಹಾವಳಿಯನ್ನು ನಿಭಾಯಿಸುವಲ್ಲಿ ವಿಫಲವಾಗಿರುವ ಟ್ರಂಪ್ ಅವರನ್ನು ಸೋಲಿಸಿ, ಬೈಡನ್ ಹಾಗೂ ಅಮೆರಿಕದ ಉಪಾಧ್ಯಕ್ಷ ಸ್ಥಾನದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಭಾರತ ಮೂಲದ ಕಮಲಾ ದೇವಿ ಹ್ಯಾರಿಸ್ ಅವರನ್ನು ಆಯ್ಕೆ ಮಾಡಬೇಕು ಎಂದು ಒಬಾಮಾ ಜನರಿಗೆ ಕರೆ ನೀಡಿದರು.
uu