ಅಮೇರಿಕಾ : ಹದಿನಾರರ ಹರೆಯದ ಕರಿಯ ಬಾಲಕಿಯನ್ನು ಗುಂಡಿಟ್ಟು ಕೊಂದ ಪೋಲೀಸರು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊಲಂಬಸ್: ಹದಿನಾರರ ಹರೆಯದ ಮಾಕಿಯಾ ಬ್ರೈಯಾಂಟ್ ಎಂಬ ಕರಿಯ ಬಾಲಕಿಯನ್ನು  ಅಮೇರಿಕನ್ ಪೋಲೀಸರು ಗುಂಡಿಟ್ಟು ಕೊಂದಿದ್ದಾರೆ. ಜಾರ್ಜ್ ಫ್ಲಾಯ್ಡ್ ಪ್ರಕರಣದ ತೀರ್ಪು ಹೊರ ಬೀಳುವ ಕೆಲವೇ ನಿಮಿಷಗಳ ಮೊದಲು ಘಟನೆಯು ನಡೆದಿರುವುದೆಂದುದಿ ಗಾರ್ಡಿಯನ್ವರದಿ ಮಾಡಿದೆ.

ತನಗಿಂತ ಹೆಚ್ಚು ಪ್ರಾಯವಿರುವ ಮಕ್ಕಳು ತನಗೆ ಕಿರುಕುಳ ನೀಡುತ್ತಿದ್ದಾರೆಂದೂ, ಅವರಿಂದ ತನಗೆ ರಕ್ಷಣೆ ನೀಡಬೇಕೆಂದೂ ಆಗ್ರಹಿಸಿ, ಸ್ವತಃ ಬ್ರೈಯಾಂಟಳೇ ಪೋಲೀಸರಿಗೆ ಕರೆ ನೀಡಿದ್ದಳು ಎಂದು ಆಕೆಯ ಚಿಕ್ಕಮ್ಮ ಹಸೆಲ್ ಆರೋಪಿಸಿದ್ದಾರೆ. ಸ್ಥಳಕ್ಕೆ ಬಂದ ಪೋಲೀಸರು ಆಕೆಯ ಮನೆಯೆದುರಲ್ಲೇ ಆಕೆಯನ್ನು ಸಾಯಿಸಿದ್ದಾರೆ. ಮಂಗಳವಾರ ರಾತ್ರಿ ಘಟನೆ ನಡೆದಿರುವುದು.

ಗುಂಡೇಟಿನಿಂದ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ಒಯ್ಯಲಾಯಿತಾದರೂ, ವೇಳೆಗಾಗಲೇ ಆಕೆಯು ಮೃತಪಟ್ಟಿದ್ದಳು. ಘಟನೆಯಲ್ಲಿ ಉಳಿದ ಯಾರೂ ಗಾಯಗೊಂಡಿಲ್ಲ.

ಒಬ್ಬಳು ಮಹಿಳೆಯು ತಮ್ಮನ್ನು ಚೂರಿ ಹಾಕಿ ಕೊಲ್ಲಲು ಬರುತ್ತಿದ್ದಾಳೆಂಬ ಕರೆಯು ನಮಗೆ ಬಂದಿತ್ತು. ಹಾಗಾಗಿ ನಾವು ಘಟನಾ ಸ್ಥಳಕ್ಕೆ ಹೋಗಿ ಸೂಕ್ತ ಕ್ರಮ ಕೈಗೊಳ್ಳಬೇಕಾಯಿತು ಎಂದು ಪೋಲೀಸರು ಹೇಳಿದ್ದಾರೆ. ಜೊತೆಗೆ ಪೋಲೀಸರ ಸಮವಸ್ತ್ರದಲ್ಲಿ ಅಳವಡಿಸಲಾಗಿದ್ದ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯವನ್ನೂ ಬಿಡುಗಡೆಗೊಳಿಸಿದ್ದಾರೆ.

ಪೋಲೀಸರ ಹೇಳಿಕೆಯಂತೆ, ಓರ್ವ ಬಾಲಕಿಯು ಚೂರಿ ಹಿಡಿದು, ತನಗಿಂತ ಹಿರಿಯ ಇಬ್ಬರು ಬಾಲಕಿಯರನ್ನು ಇರಿದು ಕೊಲ್ಲಲು ಹೋಗುವ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿರುವ ಮೂವರು ಬಾಲಕಿಯರಲ್ಲಿ ಚೂರಿಯನ್ನು ಕೈಗೆತ್ತಿಕೊಂಡ ಬಾಲಕಿಯೇ ಮೃತ ಮಾಕಿಯಾ ಎಂದಿದ್ದಾರೆ.

ಆದರೆ ವೀಡಿಯೋದಲ್ಲಿರುವ ದೃಶ್ಯವು ಪೋಲೀಸರ ಹೇಳಿಕೆಯನ್ನು ಸಮರ್ಥಿಸುವಷ್ಟು ಸ್ಪಷ್ಠವಾಗಿ ಮೂಡಿ ಬಂದಿಲ್ಲಮಾತ್ರವಲ್ಲದೇ ವೀಡಿಯೊ ನಕಲಿಯೂ, ಎಡಿಟ್ ಮಾಡಿರುವಂಥದ್ದೂ ಎಂಬಂತಹ ಆರೋಪಗಳು ಕೇಳಿ ಬರುತ್ತಿವೆ.

ಮಾಕಿಯಾಳನ್ನು ಗುಂಡಿಟ್ಟ ಕೊಂದ ಪೋಲೀಸನ ಹೆಸರನ್ನೂ ಬಹಿರಂಗಗೊಳಿಸಲಾಗಿಲ್ಲ. ಅದೇ ರೀತಿ ಮಾಕಿಯಾಳು ಯಾಕಾಗಿ ಕತ್ತಿಯನ್ನು ಕೈಗೆತ್ತಿಕೊಂಡಳೆಂಬ ಬಗ್ಗೆಯೂ ಪೋಲೀಸರು ವಿವರಿಸಿಲ್ಲ.

ನಾವಿವತ್ತು ಸಾಮೂಹಿಕವಾಗಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ, ಕೊಲಂಬಸಿನಲ್ಲಿರುವ ಸಮೂಹವೊಂದು ಪೋಲೀಸ್ ಗುಂಡೇಟಿನಿಂದ ಇರಿತಕ್ಕೊಳಗಾಗಿದೆ. ಕೊಲಂಬಸಿನ ಪೋಲೀಸರು ನಿರಾಯುಧಳಾದ ಹದಿನೈದರ ಹರೆಯದ ಬಾಲಕಿಯನ್ನು ಗುಂಡಿಟ್ಟು ಕೊಂದಿದ್ದಾರೆ. ಇನ್ನೊಂದು ಮಗುವನ್ನು ನಾವು ಕಳೆದುಕೊಂಡಿದ್ದೇವೆ. ಇನ್ನೊಂದು ಹ್ಯಾಶ್‍ಟ್ಯಾಗ್. #JusticeforMakhiyahBryant” ಎಂದು ಜಾರ್ಜ್ ಫ್ಲಾಯ್ಡ್ ಕುಟುಂಬದ ಪರವಾಗಿ ವಾದಿಸುವ ನಾಗರಿಕ ಹಕ್ಕುಗಳ ವಕೀಲ, ಬೆನ್ ಕ್ರಂಪ್ ಟ್ವೀಟ್ ಮಾಡಿದ್ದಾರೆ.

ಪೋಲೀಸರ ನಡೆಯು ಅಮೇರಿಕನ್ ಜನರನ್ನು ಸಂಶಯಕ್ಕೆ ದೂಡಿದ್ದು, ಪಾಪ್ ಗಾಯಕ ಜಸ್ಟೀನ್ ಬೀಬರ್ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಪೋಲೀಸರ ನಡೆಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು