ವಾಷಿಂಗ್ಟನ್(07-11-2020): ಅಮೆರಿಕದ ಮತಎಣಿಕೆ ಮುಂದುವರಿದಿದ್ದು, ಡೆಮಾಕ್ರೆಟಿಕ್ ಪಕ್ಷದ ಜೋ ಬೈಡೆನ್ ಬೆಂಬಲಿಗರು ಫಿಲಡೆಲ್ಫಿಯಾದ ಬೀದಿಗಳಲ್ಲಿ ಹಾಡಿ ಕುಣಿಯುತ್ತಿದ್ದಾರೆ ಇನ್ನೊಂದೆಡೆ ಡೊನಾಲ್ಡ್ ಟ್ರಂಪ್ ಅವರ ಸಶಸ್ತ್ರಧಾರಿ ಬೆಂಬಲಿಗರು ಫೋನಿಕ್ಸ್ ನಲ್ಲಿ ‘ಮತಎಣಿಕೆಯ” ಕಳ್ಳತನ ನಿಲ್ಲಿಸಿ ಎಂದು ಕೂಗುತ್ತಿದ್ದಾರೆ.
ಜೋ ಬೈಡೆನ್ ಭಾರೀ ಮುನ್ನಡೆ ಸಾಧಿಸಿದ್ದು, ಗೆಲುವಿನ ಹೊಸ್ತಿಲಿನಲ್ಲಿದ್ದಾರೆ. ಇದರಿಂದಾಗಿ ಅಮೆರಿಕಾದಲ್ಲಿ ಮಿಚಿಗನ್ ನ ಮತಎಣಿಕೆ ಕೇಂದ್ರದ ಹೊರಭಾಗದಲ್ಲಿ ಟ್ರಂಪ್ ಬೆಂಬಲಿಗರು ಘೋಷಣೆ ಕೂಗುತ್ತಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ 264 ಎಲೆಕ್ಟ್ರೋರಲ್ ಮತ ಪಡೆದಿದ್ದು, ಡೊನಾಲ್ಡ್ ಟ್ರಂಪ್ 214 ಎಲೆಕ್ಟ್ರೋರಲ್ ಮತ ಪಡೆದು ಹಿನ್ನಡೆ ಅನುಭವಿಸಿದ್ದಾರೆ. ಅಮೆರಿಕಾದ ಅಧ್ಯಕ್ಷ ಗಾದಿಗೆ ಒಟ್ಟು 270 ಎಲೆಕ್ಟ್ರೋರಲ್ ಮತವನ್ನು ಪಡೆಯಬೇಕಿದೆ.