ಅಮೇರಿಕಾದ ಮೇಲೆ ಬೃಹತ್ ಸೈಬರ್ ದಾಳಿ | ಇಂಧನ ಪೂರೈಕೆ ಅಲ್ಲೋಲ ಕಲ್ಲೋಲ ; ತುರ್ತು ಶಾಸನಗಳ ಅಂಗೀಕಾರ

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಾಷಿಂಗ್ಟನ್, ಡಿಸಿ: ಅಮೇರಿಕಾದ ಮೇಲೆ ಬೃಹತ್ ಸೈಬರ್ ದಾಳಿ ನಡೆದಿದ್ದು, ಇಂಧನ ಪೂರೈಕೆ ವ್ಯವಸ್ಥೆಯು ಅಲ್ಲೋಲ ಕಲ್ಲೋಲವಾಗಿದೆ.

ಅಮೇರಿಕಾದ ಅತ್ಯುನ್ನತ ಇಂಧನ ಪೂರೈಕೆ ಕಂಪೆನಿಯಾಗಿರುವ ಕಲೋನಿಯಲ್ ಸಂಸ್ಥೆಯ ಇಂಧನ ಪೂರೈಕೆ ವ್ಯವಸ್ಥೆಯೇ ಹ್ಯಾಕರುಗಳ ದಾಳಿಗೊಳಗಾಗಿರುವುದು. ದಾಳಿಯ ಹೊಣೆಯನ್ನು ಇದುವರೆಗೆ ಯಾರೂ ಹೊತ್ತು ಕೊಂಡಿಲ್ಲ. ಅದರೆ ಯಾವುದೋ ಸುಲಿಗೆಕೋರ ಸೈಬರ್ ಅಪರಾಧಿಗಳ ಗ್ಯಾಂಗುಗಳು ಇದರ ಹಿಂದಿದೆಯೆಂದು ಊಹಿಸಲಾಗಿದೆ.

ಜಗತ್ತಿನ ಅತಿ ಸರಕ್ಷಿತ ಸೈಬರ್ ವ್ಯವಸ್ಥೆಯನ್ನು ಹೊಂದಿರುವ ಅಮೇರಿಕಾ ಕೂಡಾ ಸೈಬರ್ ದಾಳಿಗೆ ಸುಲಭವಾಗಿ ತುತ್ತಾಗಿರುವುದು ಜಗತ್ತಿನಾದ್ಯಂತ ನೆಟ್ ಬಳಕೆದಾರರ ಆತಂಕಕ್ಕೆ ಕಾರಣವಾಗಿದೆ. ಇಂಧನ ಪೂರೈಕೆಯು ಅಸ್ತವ್ಯಸ್ತಗೊಂಡ ಪರಿಣಾಮವಾಗಿ ಅಮೇರಿಕಾದಲ್ಲಿ ತೈಲ ಬೆಲೆಯಲ್ಲೂ ಏರಿಕೆಯಾಗಿದೆ.

25 ಲಕ್ಷ ಬ್ಯಾರಲ್‌ನಷ್ಟು ಇಂಧನಗಳನ್ನು ಸುಮಾರು 8,850 ಕಿ.ಮೀ.ವರೆಗೂ ಪ್ರತಿದಿನ ಪೂರೈಕೆ ಮಾಡುವ ಕಲೋನಿಯಲ್ ಕಂಪೆನಿಯ ಮೇಲಿನ ದಾಳಿಯಿಂದಾಗಿ ಅಮೆರಿಕದ ಪೂರ್ವ ಕರಾವಳಿಯ ಅರ್ಧದಷ್ಟು ಭಾಗಗಳಿಗೆ ಮತ್ತು ಇನ್ನಿತರ ಪ್ರಮುಖ ಪ್ರದೇಶಗಳಿಗೆ ತೈಲ ಪೂರೈಕೆಯು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ವಿಮಾನದ ಇಂಧನಗಳಿಗೂ ಕೊರತೆ ಕಂಡುಬಂದಿದೆ.

ಮೂಲಕ ಕೋವಿಡ್ ವೈರಸ್ ಜೊತೆಗೆ ಡಿಜಿಟಲ್ ವೈರಸ್ ಕೂಡಾ ಜಗತ್ತಿನ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಕಂಪೆನಿಯ ಸಮಸ್ಯೆಯನ್ನು ಸರಿಪಡಿಸಲು ಸ್ವತಃ ಅಮೇರಿಕಾ ಸರಕಾರವೇ ಮುಂದೆ ಬಂದಿದ್ದು, ಕೆಲವು ತುರ್ತು ಶಾಸನಗಳನ್ನು ಅಂಗೀಕರಿಸಿದೆ.

ಕಂಪೆನಿಯ ಇಂಧನ ಸರಬರಾಜು ವ್ಯವಸ್ಥೆಯು ಸಂಪೂರ್ಣವಾಗಿ ಡಿಜಿಟಲೀಕರಣಕ್ಕೆ ಒಳಗಾಗಿರುವುದರಿಂದ ಸರಿಪಡಿಸಲು ಸಾಕಷ್ಟು ಸಮಯ ಬೇಕಾಗಬಹುದೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು