ಅಂಬಾನಿ ಹಾಗೂ ಅದಾನಿಯಂತಹ ಶ್ರೀಮಂತರ ಸಂಪತ್ತನ್ನು ಲಸಿಕೆ ಉತ್ಪಾದನೆಗೆ ಖರ್ಚು ಮಾಡಲಿ: ಡಾ.ಪುಷ್ಪ ಅಮರನಾಥ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮೈಸೂರು: ಕೊರೊನ 3ನೇ ಅಲೆಯಿಂದ ದೇಶದ ಮಕ್ಕಳನ್ನ ರಕ್ಷಿಸಬೇಕು ಎಂದು ಭಾರತದ ತಾಯಿಂದರ ಪರವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ ಅವರು ಪ್ರಧಾನಿ ಮೋದಿಯವರಿಗೆ ಕೈ ಮುಗಿದು ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕರೋನಾ 3ನೇ ಅಲೆ ಬಗ್ಗೆ ಈವರೆಗೂ ಪ್ರಧಾನಿ ಒಂದೇ ಒಂದು ಸಭೆಯನ್ನು ಮಾಡಿಲ್ಲ. ಆರೋಗ್ಯ ಇಲಾಖೆ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ, ದೇಶದ ಮಕ್ಕಳ ಆರೋಗ್ಯ ಕಾಪಾಡಲು ಪೌಷ್ಟಿಕಾಂಶ ಹೆಚ್ಚು ಮಾಡಲು ಸರ್ಕಾರದಿಂದ ಯಾವ ಕ್ರಮವನ್ನು ತೆಗೆದುಕೊಂಡಿದ್ದೀರಿ? ಮಕ್ಕಳನ್ನ ಕಾಪಾಡಿಕೊಳ್ಳಲು ತಜ್ಞರೇ ಸಲಹೆ ಕೊಡುತ್ತಿದ್ದಾರೆ. ಭವಿಷ್ಯದ ಜನರೇಷನ್ ಕಾಪಾಡಿಕೊಳ್ಳಬೇಕಿದೆ ಎಂದು ನರೇಂದ್ರ ಮೋದಿಯವರಿಗೆ ಪ್ರಶ್ನಿಸಿದ್ದಾರೆ.

ಕರ್ನಾಟಕ ಅತೀ ಹೆಚ್ಚು ತೆರಿಗೆ ಪಾವತಿಸುವ ರಾಜ್ಯ. ಎಲ್ಲರಿಗೂ ನಮ್ಮ ತೆರಿಗೆ ಹಣದಲ್ಲಿ ಲಸಿಕೆ ಸರಕಾರ ವಿತರಿಸಲಿ ದೇಶದ ಅತಿ ದೊಡ್ಡ ಶ್ರೀಮಂತರಿಂದ ಹಣ ಪಡೆದು ಲಸಿಕೆ ಖರೀದಿಸಿ. ಮುಂದಿನ ಒಂದು ತಿಂಗಳ ಒಳಗೆ ಜಿಲ್ಲಾ ಮಟ್ಟದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು
ಸೂಚನೆ ನೀಡಬೇಕು.ಈ ವಿಚಾರದಲ್ಲಿ ತಡ ಮಾಡುವುದು ಬೇಡ. ಬಿಜೆಪಿಯ ಎಲ್ಲಾ 25 ಸಂಸದರು ಈ ಬಗ್ಗೆ ಮಾತನಾಡಿ ಎಂದು ಆಗ್ರಹಿಸಿದ್ದಾರೆ.

ತೆರಿಗೆ ಹಣದಲ್ಲೇ ಲಸಿಕೆ ಖರೀದಿಸಿ ಜನರ ಪ್ರಾಣ ಉಳಿಸಿ. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಗ್ರಾಮೀಣ ಭಾಗದ ಮತ್ತು ಬಡವರ ಮಕ್ಕಳ ಪೌಷ್ಟಿಕಾಂಶ ಕಾಪಾಡಿಕೊಳ್ಳಲು ಮುಂದಾಗಬೇಕು. ಮಲ್ಟಿ ವಿಟಮಿನ್ ಟ್ಯಾಬ್ಲೆಟ್ಸ್, ಸಿರಪ್ಸ್ ನೀಡಿ ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸಿ, ದೇಶದ ಭವಿಷ್ಯ ಮಕ್ಕಳನ್ನ ಕಾಪಾಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದೇಶದ ಅಮೂಲ್ಯ ಮಕ್ಕಳನ್ನು ರಕ್ಷಿಸಬೇಕಾದರೆ ಎಲ್ಲರಿಗೂ ಬೇಗ ಲಸಿಕೆ ನೀಡಬೇಕು, ದೇಶದಲ್ಲಿ ಹೆಚ್ಚಿನ ಲಸಿಕೆ ಉತ್ಪಾದಿಸಬೇಕು. ಇದರಿಂದ ಕೊರೊನಾ ಮೂರನೇ ಅಲೆ ತಡೆಗಟ್ಟಲು ಏಕೈಕ ಮಾರ್ಗ.ಹಾಗೂ
ಅಂಬಾನಿ ಹಾಗೂ ಅದಾನಿಯಂತಹ ಶ್ರೀಮಂತ ಜನರು ತಮ್ಮ ಸಂಪತ್ತನ್ನು ಲಸಿಕೆ ಉತ್ಪಾದನೆಗೆ ಖರ್ಚು ಮಾಡಲು ಬೇಗ ಮುಂದಾಗಬೇಕು ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು