ಕನ್ನಡ ಧ್ವಜವನ್ನು ಅಪಮಾನಿಸಿದ ‘ಅಮೆಜಾನ್‌’ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕು: ಎಚ್.ಡಿ.ಕುಮಾರಸ್ವಾಮಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕನ್ನಡದ ಧ್ವಜವನ್ನು ಅಪಮಾನಿಸಿದ ಕೆನಡಾದ @amazonಗೆ ಕನ್ನಡಿಗರು ಬಿಸಿಮುಟ್ಟಿಸಿದ್ದಾರೆ. ಅಮೆಜಾನ್‌ ತನ್ನ ತಪ್ಪು ಸರಿಪಡಿಸಿಕೊಂಡಿದೆ. ಕನ್ನಡವನ್ನು ಅವಮಾನಿಸಿದ ಗೂಗಲ್‌ಗೆ ಪಾಠ ಕಲಿಸಿದ್ದು, ಈಗ ಅಮೆಜಾನ್‌ಗೆ ಬುದ್ಧಿ ಕಲಿಸಿದ್ದರಲ್ಲಿ ಎದ್ದು ಕಾಣುವಂಥದ್ದು ಕನ್ನಡಿಗರ ‘ಅಭಿಮಾನ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕನ್ನಡದ ಮನಸ್ಸುಗಳನ್ನು ಅಭಿನಂದಿಸಿದ್ದಾರೆ.

ಕನ್ನಡ, ಕರ್ನಾಟಕದ ವಿಚಾರದಲ್ಲಿ ಇತ್ತೀಚೆಗೆ ಬಹುರಾಷ್ಟ್ರೀಯ ಕಂಪನಿಗಳು ಅತ್ಯಂತ ಅಜಾಗರೂಕವಾಗಿ, ಅಸೂಕ್ಷ್ಮವಾಗಿ ವರ್ತಿಸುತ್ತಿವೆ. @Google ನಂತರ ಈಗ @amazonನ ಕೆನಡಾ ವಿಭಾಗ ನಿರ್ಲಕ್ಷ್ಯ ಮೆರೆದಿದೆ. ಈ ಸಂಸ್ಥೆಗಳು ಭಾಷೆ ಮತ್ತು ಭಾವನೆಗಳ ವಿಚಾರದಲ್ಲಿ ಯಾಕಿಂಥ ನಿರ್ಲಕ್ಷ್ಯವಹಿಸುತ್ತಿವೆ? ಈ ಬಗ್ಗೆ @amazon ಪ್ರತಿಕ್ರಿಯೆ ನೀಡಬೇಕು ಎಂದಿದ್ದಾರೆ.

ಬಾವುಟದ ಜೊತೆಗೇ, ಕರ್ನಾಟಕದ ರಾಜಲಾಂಛನವನ್ನೂ ಅಮೆಜಾನ್‌ ಅಮಾನಿಸಿದೆ. ಇದು ಸರ್ಕಾರಕ್ಕೆ ಮಾಡಲಾದ ಅಪಮಾನ. ಸರ್ಕಾರ ಸಂವಿಧಾನದ ಅಂಗ. ಹೀಗಾಗಿ @amazon ನಿಂದ ಬಹುದೊಡ್ಡ ಅಪಚಾರವಾಗಿದೆ. ಅಮೆಜಾನ್‌ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವೇ ಎಂಬುದರತ್ತ ರಾಜ್ಯ ಸರ್ಕಾರ ಗಮನ ಹರಿಸಬೇಕು. ಮುಂದೆ ಇಂಥ ಮುಜುಗರ ತಪ್ಪಿಸಲು ಇದು ಅಗತ್ಯ ಎಂದು ಅವರು ಹೇಳಿದ್ದಾರೆ.

‘ಕನ್ನಡ ಕೆಟ್ಟ ಭಾಷೆ‘ ಎಂಬ ವಿಚಾರ ಗೂಗಲ್‌ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಈ ಘಟನೆಯೂ ಬಯಲಾಗಿರುವುದನ್ನು ಗಮನಿಸುತ್ತಿದ್ದರೆ, ಕನ್ನಡ, ಕರ್ನಾಟಕಕ್ಕೆ ಅಪಚಾರ ಮಾಡಲು ಪಟ್ಟಭದ್ರ ಹಿತಾಸಕ್ತಿ ಕೆಲಸ ಮಾಡುತ್ತಿರುವ ಅನುಮಾನ ಮೂಡುತ್ತಿದೆ. ಜನಸಮುದಾಯವೊಂದರ ಭಾವನೆಗಳ ಜೊತೆಗೆ ಆಟವಾಡುತ್ತಿರುವವರನ್ನು ಪತ್ತೆ ಹಚ್ಚುವ ಸಂದರ್ಭ ಈಗ ಸೃಷ್ಟಿಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂಥ ಅಪಮಾನಗಳ ಮೂಲಕ ಕನ್ನಡಿಗರ ಸಹನೆ ಕೆಣಕುವ ಕೆಲಸ ಇಂಥ ಸಂಸ್ಥೆಗಳಿಂದ ಆಗುತ್ತಲೇ ಇವೆ. ಕನ್ನಡಿಗರ ಕೋಪದಿಂದ ಸಿಡಿಯುವ ಕಿಡಿಯಿಂದ ಅನಾಹುತಗಳು ಸಂಭವಿಸಿದರೆ, ಅದನ್ನು ತಾಳಿಕೊಳ್ಳುವ ಶಕ್ತಿ ಈ ಸಂಸ್ಥೆಗಳಿಗೆ ಉಳಿಯಲಾರದು. ಪರಿಸ್ಥಿತಿ ಅಲ್ಲಿಗೆ ಹೋಗುವ ಮೊದಲು @amazon ಜಾಗತಿಕವಾಗಿ ಕ್ಷಮೆ ಕೋರಬೇಕು. ತಪ್ಪಿತಸ್ಥರನ್ನು ಹಿಡಿದುಕೊಡಬೇಕು ಎಂದು ಎಚ್.ಡಿ.ಕೆ.ಆಗ್ರಹಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು