ರಾಜ್ಯಾಧ್ಯಂತ ‘ವೀಕೆಂಡ್ ಕರ್ಪ್ಯೂ’ ರದ್ದು, ನೈಟ್ ಕರ್ಪ್ಯೂ ಮುಂದುವರಿಕೆ: ಸಚಿವ ಆರ್ ಅಶೋಕ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಾಜ್ಯದಲ್ಲಿ ಜಾರಿಗೊಳಿಸಿದ್ದಂತ ವೀಕೆಂಡ್ ಕರ್ಪ್ಯೂವನ್ನು ರದ್ಧುಗೊಳಿಸಲಾಗುತ್ತಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ್ರೇ ಮತ್ತೆ ಮುಂದುವರೆಸಲಾಗುತ್ತದೆ. ಆಸ್ಪತ್ರೆಗೆ ಸೇರುವವರ ಸಂಖ್ಯೆಯ ಆಧಾರದ ಮೇಲೆ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.

ಇಂದು ಸಿಎಂ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಸಭೆಯ ನಿರ್ಧಾರಗಳನ್ನು ಸುದ್ದಿಗಾರರೊಂದಿಗೆ ತಿಳಿಸಿದಂತ ಅವರು, ಮುಖ್ಯಮಂತ್ರಿ ಬೊಮ್ಮಾಯಿಯವರ ನೇತೃತ್ವದಲ್ಲಿ 2 ಗಂಟೆಗೂ ಅಧಿಕ ಸಮಯದ ಕೋವಿಡ್ ನಿಯಂತ್ರಣ ಸಭೆಯನ್ನು ನಡೆಸಲಾಗಿಯಿತು. ಎಲ್ಲಾ ತಜ್ಞರ ಅಭಿಪ್ರಾಯವನ್ನು ಸಿಎಂ ಸಭೆಯಲ್ಲಿ ಪಡೆದರು. ಆರೋಗ್ಯ, ಗೃಹ ಸಚಿವರು ಸೇರಿದಂತೆ ವಿವಿಧ ಸಚಿವರಿಂದಲೂ ಅಭಿಪ್ರಾಯವನ್ನು ಪಡೆದರು. ಬಹಳ ದೊಡ್ಡ ನಿರ್ಧಾರವನ್ನು ಸರ್ಕಾರ ಘೋಷಣೆ ಮಾಡುತ್ತಿದೆ. ವೀಕೆಂಡ್ ಕರ್ಪ್ಯೂ ಇತ್ತು ಅದನ್ನು ಇವತ್ತು ರದ್ದುಗೊಳಿಸಲಾಗುತ್ತಿದೆ. ಅದಕ್ಕೆ ತಜ್ಞರ ವರದಿಯೂ ಆಧಾರವಾಗಿದೆ ಎಂದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು