ಜಿದ್ದಾ (9-11-2020): ಹೋಟೆಲ್, ರೆಸ್ಟೋರೆಂಟ್, ಬೇಕರಿ ಮುಂತಾದವುಗಳು ತಮ್ಮಲ್ಲಿ ತಯಾರಿಸಿದ ಆಹಾರಗಳು ಎಷ್ಟು ಕ್ಯಾಲೊರಿಗಳನ್ನು ಹೊಂದಿದೆ ಎನ್ನುವುದನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ. ಇದನ್ನು ಕಳೆದ ವರ್ಷವೇ ಜಾರಿಗೆ ತರಲಾಗಿತ್ತು. ಈಗ ಸೌದಿ ಸರಕಾರವು ಅದನ್ನು ತುಂಬಾ ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ.
ಸಂಸ್ಥೆಯಲ್ಲಿ ತಯಾರಾದ ಪ್ರತಿಯೊಂದು ಆಹಾರಗಳು ಎಷ್ಟು ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿದೆಯೆಂಬ ಪಟ್ಟಿಯನ್ನು ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು. ಗ್ರಾಹಕರಿಗೂ ತಾವು ಸೇವಿಸುವ ಆಹಾರದಲ್ಲಿ ಎಷ್ಟು ಕ್ಯಾಲೊರಿಗಳಿದೆಯೆಂಬ ಮಾಹಿತಿ ಗೊತ್ತಾಗಬೇಕು.
ಈ ಕಾನೂನುಗಳನ್ನು ಪಾಲಿಸದ ಸಂಸ್ಥೆಗಳಿಗೆ ದಂಡ ಹಾಕಲಾಗುವುದು. ಕಾನೂನು ಉಲ್ಲಂಘನೆಯನ್ನು ಪುನರಾವರ್ತನೆ ಮಾಡಿದರೆ ವಿಧಿಸುವ ದಂಡ ದುಪ್ಪಟ್ಟಾಗುವುದೆಂದು ಸೌದಿ ಫುಡ್ ಆ್ಯಂಡ್ ಡ್ರಗ್ ಅಥಾರಿಟಿ ತಿಳಿಸಿದೆ.