ಮೋದಿ ಸರಕಾರದಲ್ಲಿ ಏಕೈಕ ಮಿತ್ರಪಕ್ಷದ ಪ್ರತಿನಿಧಿ | ಸರಕಾರ ರಚನೆ ವೇಳೆ ಇದ್ದ ಎನ್ ಡಿಎ ಮಿತ್ರಪಕ್ಷಗಳ ಪ್ರತಿನಿಧಿಗಳಿಗೆ ಏನಾಯ್ತು?

Share on facebook
Share on twitter
Share on linkedin
Share on whatsapp
Share on telegram
Share on email
Share on print

ವದೆಹಲಿ(10-10-2020): ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ (ಆರ್‌ಪಿಐ) ರಾಮದಾಸ್ ಅಥಾವಾಲೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಒಬ್ಬನೇ ಒಬ್ಬ ಪಾಲುದಾರರಾಗಿದ್ದಾರೆ.

ಲೋಕ ಜನಶಕ್ತಿ ಪಕ್ಷದ ಮುಖಂಡ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ನಂತರ, ಕೇಂದ್ರ ಸಚಿವ ಸಂಪುಟದಲ್ಲಿ ಬಿಜೆಪಿ ಮಿತ್ರಪಕ್ಷಗಳಿಗೆ ಯಾವುದೇ ಪ್ರಾತಿನಿಧ್ಯ ನೀಡಲಾಗಿಲ್ಲ.

2019 ರಲ್ಲಿ ಮೋದಿ 2.0 ಸರ್ಕಾರ ಅಧಿಕಾರಕ್ಕೆ ಬಂದಾಗ ಶಿವಸೇನೆಯ ಅರವಿಂದ ಸಾವಂತ್, ಶಿರೋಮಣಿ ಅಕಾಲಿ ದಳದ ಹರ್ಸಿಮ್ರತ್ ಕೌರ್ ಬಾದಲ್ ಮತ್ತು ಲೋಕ ಜನಶಕ್ತಿ ಪಕ್ಷದ ರಾಮ್ ವಿಲಾಸ್ ಪಾಸ್ವಾನ್ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿದ್ದರು.

ಚುನಾವಣೆ ಬಳಿಕ.ಶಿವಸೇನೆ 2019 ರ ಕೊನೆಯಲ್ಲಿ ಎನ್‌ಡಿಎಯನ್ನು ತೊರೆದರೆ, ಹೊಸ ಕೃಷಿ ಶಾಸನಗಳ ಕುರಿತು ಶಿರೋಮಣಿ ಅಕಾಲಿ ದಳ ಇತ್ತೀಚೆಗೆ ಮೈತ್ರಿಯನ್ನು ತೊರೆಯಿತು. ಮತ್ತೊಂದು ಪ್ರಮುಖ ಎನ್‌ಡಿಎ ಮಿತ್ರಪಕ್ಷ ಜೆಡಿಯುವನ್ನು ಸರ್ಕಾರದಿಂದ ದೂರವಿರಿಸಿತ್ತು.

ಪ್ರಧಾನಿ ಮೋದಿಯವರಲ್ಲದೆ, ಒಟ್ಟು 57 ಮಂತ್ರಿಗಳು – 24 ಕ್ಯಾಬಿನೆಟ್ ಮಂತ್ರಿಗಳು, ಒಂಬತ್ತು ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿಯೊಂದಿಗೆ) ಮತ್ತು 24 ರಾಜ್ಯ ಸಚಿವರು – ಕೇಂದ್ರ ಸಚಿವರ ಪರಿಷತ್ತಿನ ಸದಸ್ಯರಾಗಿ 2019 ರ ಮೇ 30 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.

ಅರವಿಂದ ಸಾವಂತ್ ಮತ್ತು ಹರ್ಸಿಮ್ರತ್ ಕೌರ್ ಬಾದಲ್ ಅವರ ರಾಜೀನಾಮೆ ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರ ಮರಣದ ನಂತರ, 21 ಕ್ಯಾಬಿನೆಟ್ ಮಂತ್ರಿಗಳಿದ್ದಾರೆ.

 ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಸಾವಿನ ಬಳಿಕ, ರಾಜ್ಯ ಸಚಿವರ ಸಂಖ್ಯೆಯೂ 23 ಕ್ಕೆ ಇಳಿದಿದೆ.

ಸಂವಿಧಾನದ ಪ್ರಕಾರ, ಲೋಕಸಭೆಯಲ್ಲಿನ ಒಟ್ಟು ಸದಸ್ಯರ ಸಂಖ್ಯೆಯಲ್ಲಿ ಪ್ರಧಾನಿ ಸೇರಿದಂತೆ ಒಟ್ಟು ಕೇಂದ್ರ ಸಚಿವರ ಸಂಖ್ಯೆ ಶೇಕಡಾ 15 ಮೀರಬಾರದು. 543 ಸದಸ್ಯರ ಲೋಕಸಭೆಯಲ್ಲಿ ಪಿಎಂ ನರೇಂದ್ರ ಮೋದಿಯವರು 80 ಮಂತ್ರಿಗಳನ್ನು ಹೊಂದಬಹುದು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು