ಈ ಹಿಂದೆ ನೀಡಿದ್ದ ತೀರ್ಪನ್ನು ರದ್ದು ಮಾಡಿದ ಅಲಹಾಬಾದ್ ಹೈಕೋರ್ಟ್: ಲವ್ ಜಿಹಾದ್ ಬಗ್ಗೆ ಇನ್ನು ಬಿಜೆಪಿಗರು ಹೇಗೆ ಮಾತನಾಡುತ್ತಾರೆ?

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(24-11-2020): ವಿವಾಹಕ್ಕಾಗಿ ಮತಾಂತರ ಮಾನ್ಯವಲ್ಲವೆಂದು ಅಲಹಾಬಾದ್ ಹೈಕೋರ್ಟ್ ಏಕಸದಸ್ಯ ಪೀಠ ಈ ಹಿಂದೆ ನೀಡಿದ್ದ ತೀರ್ಪನ್ನು ಹೈಕೋರ್ಟ್ ವಿಭಾಗಿಯ ಪೀಠ ರದ್ದುಪಡಿಸಿದೆ.

ನ್ಯಾಯಮೂರ್ತಿಗಳಾದ ವಿವೇಕ್ ಅಗರವಾಲ್ ಮತ್ತು ಪಂಕಜ್ ನಖ್ವಿ ಅವರ ವಿಭಾಗೀಯ ಪೀಠ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಆಗುವುದಿಲ್ಲ. ಮತಾಂತರದ ವಿರುದ್ಧ ಕಾನೂನು ಸರಿಯಲ್ಲವೆಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡುವಲ್ಲಿ ವಯಸ್ಕರು ಸ್ವತಂತ್ರರಾಗಿದ್ದಾರೆ ಎಂದು ಹೇಳಿದೆ.

ಹಲಹಬಾದ್ ಹೈಕೋರ್ಟ್ ಈ ಹಿಂದೆ ವಿವಾಹಕ್ಕಾಗಿ ಮತಾಂತರ ಮಾನ್ಯವಲ್ಲ ಎಂದು ಹೇಳಿತ್ತು. ಈ ಬಳಿಕ ಬಿಜೆಪಿ ಆಡಳಿತದ ರಾಜ್ಯಗಳು ಲವ್ ಜಿಹಾದ್ ಎಂಬ ಅಪ್ರಸ್ತುತ ಪದ ಬಳಕೆ ಮಾಡಿ, ಮಸೂದೆ ಜಾರಿಗೆ ಗೊಳಿಸುವ ಲವ್ ಜಿಹಾದ್ ರದ್ದುಗೊಳಿಸುವ, ಕಠಿಣ ಶಿಕ್ಷೆ ವಿಧಿಸುವ ಚರ್ಚೆಯನ್ನು ಮಾಡುತ್ತಿತ್ತು.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು