ಗಾಝಾದ ಮಾಧ್ಯಮ ಸಂಸ್ಥೆಗಳಿದ್ದ ಸಮುಚ್ಚಯದಲ್ಲಿ ಹಮಸ್ ಚಟುವಟಿಕೆಗಳಿದ್ದ ಬಗ್ಗೆ ಪುರಾವೆ ಇಲ್ಲ: ಅಸೋಸಿಯೇಟೆಡ್ ಪ್ರೆಸ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ನ್ಯೂಯಾರ್ಕ್: ಗಾಝಾದ ಮಾಧ್ಯಮ ಸಂಸ್ಥೆಗಳ ಕಛೇರಿಗಳಿದ್ದ ಕಟ್ಟಡದಲ್ಲಿ ಹಮಸ್ ಕಾರ್ಯಾಚರಣೆ ನಡೆಸುತ್ತಿದ್ದ ಬಗ್ಗೆ ಪುರಾವೆ ಇಲ್ಲವೆಂದು ಅಸೋಸಿಯೇಟೆಡ್ ಪ್ರೆಸ್(AP News) ಹೇಳಿದೆ.

ಕಳೆದ ತಿಂಗಳು ಇಸ್ರೇಲ್ಫೆಲೆಸ್ತೀನ್ ಸಂಘರ್ಷದ ಸಮಯದಲ್ಲಿ ಇಸ್ರೇಲ್ ಸೈನ್ಯವು ಅಂತರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದಅಲ್ಜಲಾ ಟವರ್ಅನ್ನು ಬಾಂಬ್ ಸುರಿಸಿ ನೆಲಸಮ ಮಾಡಿತ್ತು. ಧ್ವಂಸಗೊಳಿಸುವ ಮುನ್ನೆಚ್ಚರಿಕೆ ಕೊಟ್ಟ ಒಂದು ಗಂಟೆಯಲ್ಲೇ ದಾಳಿ ಮಾಡಿತ್ತು. ಅಲ್ಲದೇ ಕಟ್ಟಡದಲ್ಲಿ ಹಮಸ್ ಕಾರ್ಯಾಚರಿಸುತ್ತಿದ್ದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತೆಂಬ ಸಮರ್ಥನೆಯನ್ನೂ ನೀಡಿತ್ತು.

ನಿನ್ನೆಯಷ್ಟೇ ಇಸ್ರೇಲಿನ ಯುಎಸ್, ಯುಎನ್ ರಾಯಭಾರಿಯಾಗಿರುವ ಗಿಲಾದ್ ಇರ್ದಾನ್ ಅಸೋಸಿಯೇಟೆಡ್ ಪ್ರೆಸ್ಸಿನ ಕಛೇರಿಗೆ ಸಂದರ್ಶನ ನೀಡಿದ್ದರು. ಸಂದರ್ಶನದಲ್ಲಿಅಲ್ ಜಲಾ ಟವರ್ನಲ್ಲಿ ಹಮಸ್ ಸೈನ್ಯವು, ಇಸ್ರೇಲಿನ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ನಾಶಪಡಿಸಲು  ಕಾರ್ಯಾಚರಣೆ ನಡೆಸಿತ್ತೆಂದು ಅಸೋಸಿಯೇಟ್ ಪ್ರೆಸ್ಸಿಗೆ ಮನವರಿಕೆ ಮಾಡಲು ಯತ್ನಿಸಿದ್ದರು. ಸಂದರ್ಶನದ ಬೆನ್ನಿಗೇ ಇಸ್ರೇಲ್ ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲವೆಂದು ಅಸೋಸಿಯೇಟೆಡ್ ಪ್ರೆಸ್ ಹೇಳಿಕೆ ಹೊರಡಿಸಿದೆ.

ಅಲ್ ಜಲಾ ಟವರ್ನಲ್ಲಿ ಅಸೋಸಿಯೇಟೆಡ್ ಪ್ರೆಸ್, ಅಲ್ ಜಝೀರಾ, ಮಿಡ್ಲೀಸ್ಟ್ ಮೊದಲಾದ ಅಂತರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಕಾರ್ಯಾಚರಿಸುತ್ತಿತ್ತು. ಕಟ್ಟಡದ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ಇಸ್ರೇಲ್ ವಿಶ್ವಾದ್ಯಂತ ಖಂಡನೆಗೂ ಒಳಗಾಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು