ಅಕ್ರಮ ಡಿನೋಟಿಫಿಕೇಷನ್ : ಬಿ.ಎಸ್.ವೈ, ನಿರಾಣಿಗೆ ಮತ್ತೆ ಭೂಕಂಟಕ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮತ್ತೆ ಭೂಕಂಟಕ ಎದುರಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಮಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಿಎಂ ಯಡಿಯೂರಪ್ಪ ಸೇರಿದಂತೆ ಸಚಿವ ಮುರುಗೇಶ್ ನಿರಾಣಿ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಕೈ ಬಿಟ್ಟಿದ್ದ ಲೋಕಾಯುಕ್ತ ಕೋರ್ಟ್ ಆದೇಶ ರದ್ದು ಮಾಡಿ ಹೈಕೋರ್ಟ್​​ ಆದೇಶ ನೀಡಿದೆ.

ಹೈಕೋರ್ಟ್​ ಆದೇಶದಿಂದ ಸಿಎಂ ಬಿಎಸ್ ವೈ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಸಚಿವ ನಿರಾಣಿಗೆ ಮತ್ತೊಮ್ಮೆ ಭೂಕಂಟಕ ಸಂಕಷ್ಟ ಎದುರಾಗಿದೆ. ದೇವನಹಳ್ಳಿ ಬಳಿ ಅಕ್ರಮವಾಗಿ 20 ಎಕರೆ ಜಮೀನು ಡಿ-ನೋಟಿಫಿಕೇಷನ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದ ಲೋಕಾಯುಕ್ತ ಪೊಲೀಸರ ಚಾರ್ಜ್ ಶೀಟ್​ ಆಧರಿಸಿ ಕ್ರಮಕೈಗೊಳ್ಳಲು ಹೈಕೋರ್ಟ್​​ ಆದೇಶಿಸಿದೆ.

ಲೋಕಾಯುಕ್ತ ಕೋರ್ಟ್​​ ಆದೇಶವನ್ನು ಪ್ರಶ್ನಿಸಿ, ಆಲಂ‌ಪಾಷ ಅವರು ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ನಾ ಅವರ ಪೀಠ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಸೂಚನೆ ನೀಡಿದೆ.

ಪ್ರಕರಣ ಹಿನ್ನಲೆ ಏನು: ಆಲಂ ಪಾಷಾ ಕಂಪನಿಗೆ ನೀಡಿದ್ದ ಜಮೀನನ್ನು ಸರ್ಕಾರ ವಾಪಸ್​ ಪಡೆದಿತ್ತು. ನಕಲಿ ದಾಖಲೆ ಸೃಷ್ಟಿಸಿ ಭೂಮಿ ಹಿಂಪಡೆದಿದ್ದಾರೆ ಎಂದು ಯಡಿಯೂರಪ್ಪ, ನಿರಾಣಿ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಇತ್ತ ಪ್ರಕರಣ ರದ್ದು ಕೋರಿ ಬಿಎಸ್​ವೈ ಅರ್ಜಿ ಸಲ್ಲಿಕೆ ಮಾಡಿದ್ದರು.

ಅಧಿಕಾರ ದುರುಪಯೋಗದ ಮೂಲಕ ಭ್ರಷ್ಟಾಚಾರ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನಕ್ಕೆ ಹೈಕೋರ್ಟ್ ತಡೆಯೊಡ್ಡಿದೆ. ಕೆಐಎಡಿಬಿ ಹಗರಣದ ಡಿನೋಟಿಫಿಕೇಷನ್ ತನಿಖೆಗೆ ಹೈಕೋರ್ಟ್ ಆದೇಶಿಸಿದೆ.

ಕಾಂಗ್ರೆಸ್ ಟ್ವೀಟ್: ಸಿಎಂ ಕುರ್ಚಿ ಮೇಲೆ ಕುಳಿತು ತನಿಖೆಯನ್ನು ಹೇಗೆ ಎದುರಿಸಿತ್ತೀರಿ? ಯಾವ ನೈತಿಕತೆಯಲ್ಲಿ ಕಳಂಕಿತ ಮುಖ್ಯಮಂತ್ರಿಯಾಗಿ ಮುಂದುವರೆಯಿತ್ತಿರಿ ಎಂದು ಕಾಂಗ್ರೆಸ್ ಪಕ್ಷ ತಮ್ಮ ಟ್ವಿಟ್ಟರ್ ನಲ್ಲಿ ಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು