ಅಕ್ಕತಂಗಿಯರನ್ನು ಏಕಕಾಲದಲ್ಲಿ ವರಿಸಿದ ಪತಿರಾಯ ಮತ್ತು ಕುಟುಂಬಿಕರ ಬಂಧನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೋಲಾರ: ಏಕಕಾಲದಲ್ಲಿ ಅಕ್ಕತಂಗಿಯನ್ನು ವರಿಸಿ ದಿನಬೆಳಗಾಗುವುದರೊಳಗೆ ಪ್ರಸಿದ್ಧಿಯಾಗಿದ್ದ ನವವಿವಾಹಿತನ ಬಂಧನವಾಗಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಲ್ಲಿ ನಡೆದ ಮದುವೆಯಲ್ಲಿ ಉಮಾಪತಿ ಎಂಬವನು, ಅಕ್ಕತಂಗಿಯರಾದ ಸುಪ್ರಿಯಾ ಮತ್ತು ಲಲಿತಾ ಎಂಬವರನ್ನು ಮೇ ಏಳರಂದು ಏಕಕಾಲದಲ್ಲಿ ಮದುವೆಯಾಗಿದ್ದ. ಮದುವೆಯ ಆಮಂತ್ರಣ ಪತ್ರವು ರಾಜ್ಯಾದ್ಯಂತ ವೈರಲಾಗಿತ್ತು.

ಘಟನೆಯ ಕುರಿತಂತೆ ಕೋಲಾರ ಜಿಲ್ಲಾಧಿಕಾರಿಯು ಅನುಮಾನಗೊಂಡರಲ್ಲದೇ, ಅಧಿಕಾರಿಗಳಿಗೆ ವರನ ಮನೆಗೆ ಹೋಗಿ ಪರಿಶೀಲನೆ ನಡೆಸುವಂತೆ ಆದೇಶಿಸಿದ್ದರು. ಪರಿಶೀಲನೆಯ ವೇಳೆ ಲಲಿತಾ ಎಂಬವರಿಗೆ ಬರೇ ಹದಿನಾರು ವರ್ಷಎಂದು ತಿಳಿದುಬಂದಿದೆ. ಹಿನ್ನೆಲೆಯಲ್ಲಿ ವರ, ವರನ ತಂದೆತಾಯಿ, ಮದುವೆ ನಡೆಸಿದ್ದ ಪೂಜಾರಿ, ಆಮಂತ್ರಣ ಪತ್ರಿಕೆ ಮುದ್ರಿಸಿದವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ವರ ಸೇರಿದಂತೆ ಕೆಲವರ ಬಂಧನವಾಗಿದೆ.

ವಿವಾಹದ ಆಮಂತ್ರಣ ಪತ್ರಿಕೆ ವೈರಲಾಗತೊಡಗಿದಾಗ, ಹಲವರು ಸಾಮಾಜಿಕ ಜಾಲತಾಣಗಳಲ್ಲಿ ವರನ ಬಗೆಗೆ ಕುಹಕವಾಡಿದ್ದರು. ವೇಳೆ ಕೆಲವು ಚಿಂತಕರೆಂದು ಗುರುತಿಸಿಕೊಂಡವರು ವರನ ಕುರಿತಂತೆ ಮಹಾ ತ್ಯಾಗಮಯಿ ಎಂದು  ಬಣ್ಣಿಸಿದ್ದರು. ಹಿರಿಯ ಸಹೋದರಿಗೆ ಮಾತು ಬರದೇ ಇದ್ದುದರಿಂದ ಕಿರಿಯ ಸಹೋದರಿಯ ಒತ್ತಾಯದ ಮೇರೆಗೆ ಮದುವೆಯಾಗಬೇಕಾಗಿ ಬಂದಿರುವುದು ಒಂದು ತ್ಯಾಗವೆಂದು ಸಮಜಾಯಿಷಿ ನೀಡಿದ್ದರು.

ಇದೀಗ ವಿಚಿತ್ರ ಬಹುಪತ್ನಿತ್ವದ ಅಸಲಿ ಮುಖವು ಬಹಿರಂಗವಾಗಿದೆ. ಮಕ್ಕಳಿಬ್ಬರನ್ನು ಏಕಕಾಲದಲ್ಲಿ ಮದುವೆಯಾಗಲು ವಧುಗಳ ತಂದೆಯೇ ಬೇಡಿಕೆ ಇಟ್ಟಿದ್ದ ಎಂದು ಹೇಳಲಾಗಿದೆ. ವರನೂ ಕೂಡಾ ಆರ್ಥಿಕವಾಗಿ ಸಧೃಢವಲ್ಲದಿದ್ದರೂ ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳುವ ಭರವಸೆ ವ್ಯಕ್ತಪಡಿಸಿದ್ದ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು