ಐವತ್ತು ಕೋಟಿ ಫೇಸ್ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಗಳು ಬಹಿರಂಗ | ಕುಂಟು ನೆಪ ಹೇಳಿದ ಫೇಸ್ಬುಕ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ನ್ಯೂಯಾರ್ಕ್: ಐವತ್ತು ಕೋಟಿಗೂ ಹೆಚ್ಚು ಫೇಸ್ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಗಳು ವೆಬ್ಸೈಟೊಂದರಲ್ಲಿ ಪತ್ತೆಯಾಗಿರುವುದಾಗಿ ಬ್ಯಸಿನೆಸ್ ಇನ್ಸೈಡರ್ ವರದಿ ಮಾಡಿದೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಕುಂಟು ನೆಪ ಹೇಳಿದ ಫೇಸ್ಬುಕ್ ವಿಚಾರ 2019 ರದ್ದು, ಬಗ್ಗೆ ಆಗಲೇ ಕ್ರಮ ಕೈಗೊಳ್ಳಲಾಗಿದೆ.’ ಎಂದಿದೆ. ಮಾಹಿತಿ ಸೋರಿಕೆಯ ವಿಚಾರದಲ್ಲಿ ಫೇಸ್ಬುಕ್ ವಿರುದ್ಧ ವಿಶ್ವಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ರೀತಿ ಫೇಸ್ಬುಕ್ ಬಳಕೆದಾರರ ಮಾಹಿತಿಗಳು ಬೇಕಾಬಿಟ್ಟಿಯಾಗಿ ಲಭ್ಯವಾದರೆ ಖಾತೆಗಳು ಹ್ಯಾಕ್ ಆಗುವ ಸಾಧ್ಯತೆಗಳಿವೆಯೆಂದು ತಂತ್ರಜ್ಞಾನ ಕ್ಷೇತ್ರದ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ವಂಚನೆ, ಬ್ಲಾಕ್ ಮೇಲ್ ಗಳಂತಹಾ ಸೈಬರ್ ಅಪರಾಧಗಳಿಗೆ ಸುಲಭ ವೇದಿಕೆ ಕಲ್ಪಿಸಿಕೊಟ್ಟಂತಾಗುವುದೆಂಬ ಆತಂಕ ವ್ಯಕ್ತವಾಗಿದೆ.

ಭಾರತ, ಅಮೇರಿಕಾ, ಬ್ರಿಟನ್ ಸೇರಿದಂತೆ ಒಟ್ಟು 106 ದೇಶಗಳಲ್ಲಿನ ಫೇಸ್ಬುಬ್ ಬಳಕೆದಾರರ ಪೂರ್ಣ ಹೆಸರು, ಮೊಬೈಲ್ ನಂಬರ್, ಫೇಸ್ಬುಕ್ ಐಡಿ, ಜನ್ಮ ದಿನಾಂಕ, ಸ್ಥಳ, ಜೈವಿಕ ಪತ್ತೆ ಮಾಹಿತಿ ಮತ್ತು ಮೇಲ್ ಐಡಿಗಳೂ ವೈಬ್ಸೈಟ್ ಒಂದರಲ್ಲಿ ಯಾರಿಗೂ ದೊರೆಯುವಂತೆ ತೆರೆದ ಸ್ಥಿತಿಯಲ್ಲಿ ಕಂಡು ಬಂದಿದೆ.

ಇಷ್ಟು ದೊಡ್ಡ ಮಟ್ಟದಲ್ಲಿ ಫೇಸ್ಬುಕ್ ಮಾಹಿತಿಗಳು ಸೋರಿಕೆಯಾಗಿರುವುದು ಇದು ಮೊದಲನೆಯ ಬಾರಿಯೇನೂ ಅಲ್ಲ. ಇದು ತನ್ನ ಬಳಕೆದಾರರ ವಿವರಗಳನ್ನು ಸಂರಕ್ಷಿಸಿಡುವ ಫೇಸ್ಬುಕ್ ಷರತ್ತುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಮೊದಲೂ ಕೂಡಾ ಫೇಸ್ಬುಕ್ ವಿರುದ್ಧ ಹೊರಿಸಲಾದ ಆರೋಪಗಳಿಗೆ ಇನ್ನಷ್ಟು ಬಲ ಬಂದಂತಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು